ಉಳ್ಳಾಲ: ಭಾರತ ಸಂವಿಧಾನ ಕೇವಲ ಒಂದು ಪುಸ್ತಕ ಅಲ್ಲ ಅದು ಶ್ರೇಷ್ಠ ಗ್ರಂಥವಾಗಿದ್ದು ಈ ನಿಟ್ಟಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನವನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಗೌರವಿಸಬೇಕು ಎಂದು ಕರ್ನಾಟಕ ವಿದಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಮಂಗಳವಾರದಂದು ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ನಡೆದ ” ಭಾರತ ಸಂವಿಧಾನ – ಅಮೃತ ಮಹೋತ್ಸವ” 75 ರ ಸಂಭ್ರಮದ ಉಪನ್ಯಾಸ ಕಾರ್ಯಕ್ರಮ ಹಾಗೂ ಪೌರ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬ ನಾಗರಿಕನೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಿರ್ಭಯವಾಗಿ ,ಒಬ್ಬಂಟಿಯಾಗಿ ,ಧೈರ್ಯ ವಾಗಿ ಓಡಾಟವಾಗಬೇಕಾದರೆ ಅದು ಡಾ.ಅಂಬೇಡ್ಕರ್ ಬರೆದ ಸಂವಿಧಾನವೇ ಮೂಲ ಕಾರಣ. ಈ ಹಿಂದೆ ದೇಶದಲ್ಲಿ ಶ್ರೀಮಂತರ ಮಕ್ಕಳಿಗೆ ಮಾತ್ರ ವಿದ್ಯಾಭ್ಯಾಸ ಪಡೆಯಲು ಅವಕಾಶ ಇತ್ತು.ದೇಶದ ಸಂವಿಂಧಾನದಿಂದ ಕಡ್ಡಾಯ ಶಿಕ್ಷಣದ ಮೂಲಕ ಇವತ್ತು ಬಡ ವರ್ಗದವರೂ ಉನ್ನತ ಮಟ್ಟದ ಶಿಕ್ಷಣ ಪಡೆಯುವಂತಾಗಿದೆ.ಶ್ರೀಮಂತರು,ವಿದ್ಯಾವಂತರು ಮಾತ್ರ ಮತದಾನ ಮಾಡಲು ಅರ್ಹರೆಂದು ಅನೇಕ ರೀತಿಯ ಚರ್ಚೆಗಳಾದಾಗ ಅಂಬೇಡ್ಕರ್ ಅವರೇ ಮತದಾನ ಮಾಡಲು ಯಾರು ಅರ್ಹರೆಂಬ ಸೂಕ್ತ ಸಲಹೆ ನೀಡಿದ್ದರು.ಸಂವಿಧಾನ ದೇಶಕ್ಕೆ ಪೂರಕವಾಗಬೇಕೆ ಹೊರತು ಅದು ದೇಶಕ್ಕೆ ಮಾರಕವಾಗಬಾರದು ಇದು ಬರೀ ಪುಸಕ್ತವಲ್ಲ ದೇಶದ ಎಲ್ಲ ಸಮಸ್ಯೆ ಎಂಬ ರೋಗಕ್ಕೆ ಜೌಷಧಿ ಕೊಡಬಲ್ಲ ಪುಸ್ತಕವಾಗಿದೆ ಎಂದರು.
ಭಾರತ ಸಂವಿಂಧಾನ ಅಮೃತ ಮಹೋತ್ಸವದ ಬಗ್ಗೆ ಉಪನ್ಯಾಸ ನೀಡಿದ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ.ಬಿ.ಕೆ.ರವೀಂದ್ರ ಎಂ.ಎ,ಮಾತನಾಡಿ ಯಾವ ದೇಶಕ್ಕೆ ಹೋದರೂ ಭಾರತದ ಸಂವಿಂಧಾನಕ್ಕೆ ಇರುವ ಗೌರವವೇ ವಿಭಿನ್ನವಾಗಿದೆ.ದೇಶದಲ್ಲಿ ನಡೆದ ಕ್ರಾಂತಿಗಳಿಂದಾಗಿ ಸಂವಿಂಧಾನ ರಚಿಸಲ್ಪಟ್ಟಿತು.ನಮ್ಮ ಯಾವುದೆ ಮೂಲಭೂತ ಹಕ್ಕುಗಳನ್ನ ಪಡಕೊಳ್ಳಲು ಸಂವಿಂಧಾನದ ಮೂಲಕವೇ ಹೋಗಬೇಕಿದೆ.ಸಂವಿಂಧಾನದ ಲೋಪ ದೋಷಗಳ ಬಗ್ಗೆ ಪ್ರಶ್ನಿಸಬಹುದು,ಆದರೆ ಸಂವಿಂಧಾನವೇ ಬೇಡ ಅನ್ನೋದು ತಪ್ಪು.ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸುವುದೂ ಸಂವಿಂಧಾನವೇ ಆಗಿದೆ ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷರುಗಳಾದ ಸದಾನಂದ ಬಂಗೇರ,ಹೈದರ್ ಪರ್ತಿಪ್ಪಾಡಿ ,ಸದಸ್ಯರಾದ ಆಲಿಯಬ್ಬ, ಉಳ್ಳಾಲ ನಗರಸಭೆ ಮಾಜಿ ಅಧ್ಯಕ್ಷರಾದ ಹುಸೇನ್ ಕುಂಙಮೋನು,ಪೌರಾಯುಕ್ತರಾದ ಮತ್ತಡಿ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿದರು.ಸ್ವಾಗತಾಧ್ಯಕ್ಷರಾದ ಕೆ. ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೆ.ಎಮ್ .ಕೆ ಮಂಜನಾಡಿ ಅತಿಥಿಗಳನ್ನ ಪರಿಚಯಿಸಿದರು.ಪ್ರ.ಕಾ.ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು.ಸತ್ಯ ಜೆ.ಕೆ ಉಳ್ಳಾಲ್ ವಂದಿಸಿದರು.
ಉಳ್ಳಾಲ ನಗರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ,ಉಪಾಧ್ಯಕ್ಷರಾದ ಸಪ್ನ ಹರೀಶ್ ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಅಶ್ರಫ್, ಕೋಟೆಕಾರು ಪ.ಪಂ ನ ನೂತನ ಅಧ್ಯಕ್ಷರಾದ ದಿವ್ಯ ಸತೀಶ್ ಶೆಟ್ಟಿ ,ಉಪಾಧ್ಯಕ್ಷರಾದ ಪ್ರವೀಣ್ ಬಗಂಬಿಲ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಸುಳ್ಳೆಂಜೀರ್, ಸೋಮೇಶ್ವರ ಪುರಸಭೆಯ ನೂತನ ಅಧ್ಯಕ್ಷರಾದ ಕಮಲ, ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಅವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
