Site icon Ullalavani

ನ.24 ರಂದು ಸೌಹಾರ್ದ ಬೆಸೆಯುವ ಮುನ್ನೂರು ಗ್ರಾಮಡೊಂಜಿ ಗೌಜಿ  ಕಾರ್ಯಕ್ರಮ

ಉಳ್ಳಾಲ: ಸೌಹಾರ್ದ ಕಲಾವಿದರು ಕುತ್ತಾರ್, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಕುತ್ತಾರ್, ಮುನ್ನೂರು ಯುವಕ ಮಂಡಲ ಮುನ್ನೂರು ಕುತ್ತಾರ್, ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಕುತ್ತಾರ್ ನಾಲ್ಕು ಸಂಸ್ಥೆ ಗಳ ಜಂಟಿ ಆಶ್ರಯದಲ್ಲಿ ಮುನ್ನೂರು ಗ್ರಾಮಡೊಂಜಿ ಕಾರ್ಯಕ್ರಮವನ್ನು ನ.24ರಂದು ಭಾನುವಾರ ಕುತ್ತಾರು ನ ದೆಪ್ಪಲಿಮಾರ್ ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಮುನ್ನೂರು ಗ್ರಾಮಡೊಂಜಿ ಗೌಜಿ ಸ್ವಾಗತ ಸಮಿತಿ ಇದರ ಪ್ರಧಾನ‌ ಕಾರ್ಯದರ್ಶಿ ಡಾ. ಜೀವನ್ ರಾಜ್ ಕುತ್ತಾರ್ ತಿಳಿಸಿದ್ದಾರೆ.
ಅವರು ಗುರುವಾರ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತ‌ನಾಡಿದರು.


ಕಾರ್ಯಕ್ರಮದ ಉದ್ಘಾಟನೆಯನ್ನು  ಗೌರವಾಧ್ಯಕ್ಷರಾದ ಬಿ.ವಿವೇಕ್ ಶೆಟ್ಟಿ ಬೊಳ್ಯ ಗುತ್ತು ಉದ್ಘಾಟಿಸಲಿದ್ದಾರೆ.
ಇಂದು ಗ್ರಾಮೀಣ ಪ್ರದೇಶಗಳು ನಾಗರೀಕರಣದತ್ತಾ ದಾಪುಗಾಲು ಇಡುತ್ತಿರುವ ಸಂದರ್ಭದಲ್ಲಿ ಇಂದಿನ ತಲೆಮಾರಿಗೆ ಕೃಷಿ ಮತ್ತು ಕೃಷಿ ಭೂಮಿಯ ಪರಿಜ್ಞಾನವೇ ಇಲ್ಲದಂತಾಗಿದೆ‌. ಮಾತ್ರವಲ್ಲದೇ ಗ್ರಾಮೀಣ ಜೀವನ ಪದ್ಧತಿಗಳು ಜನಪದ ವೈವಿಧ್ಯಮಯ ಸಂಸ್ಕೃತಿ ಗಳು ಕೂಡ ಅವಸಾನದ ಹಂಚಿಗೆ ತಲುಪಿರುವುದು ಸಹಜ. ಆದರೂ ಇಂತಹ ಪರಿಸರ ಸಾಂಸ್ಕೃತಿಕ ಜನಪದ ಕ್ರೀಡೆಗಳು ಮರೆಯಾಗಬಾರದೆಂಬ ಬಯಕೆ ಯಿಂದ  ಇಂದಿನ ಯುವ ಜನಾಂಗಕ್ಕೆ ಹಳೆ ತಲೆಮಾರಿನ ಹವ್ಯಾಸ ಗಳನ್ನು ನೆನಪಿಸುವ ಭಾಗವಾಗಿ ನಡೆಯುವ ಕಾರ್ಯಕ್ರಮ ಈ ಗ್ರಾಮಡೊ‌ಂಜಿ ಗೌಜಿ ಎಂದರು.
ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಪರಿಚಯಿಸಿ ಗ್ರಾಮಡೊಂಜಿ ಕಾರ್ಯಕ್ರಮ 2009, 2014 ಮತ್ತು 2019 ಈ ಮೂರು ಅವಧಿಯ ಪ್ರತಿ ಹಂತದಲ್ಲೂ ಹೊಸತನವನ್ನು ಪರಿಚಯಿಸುವ ಮೂಲಕ ಜಿಲ್ಲಾಮಟ್ಟದಲ್ಲಿ ವಿಭಿನ್ನತೆಯಿಂದ ಕೂಡಿದ ಕಾರ್ಯಕ್ರಮವೆಂದು ಪ್ರಶಂಸೆಗೆ ಪಾತ್ರವಾಗಿದೆ. ಈ ಬಾರಿಯೂ ವಿಭಿನ್ನತೆಯನ್ನು ಕೊಡುವ ನಿಟ್ಟಿನಲ್ಲಿ ಕೆಸರು ಗದ್ದೆಯ ಕ್ರೀಡೆಗಳಾದ ಕೆಸರಿನಲ್ಲಿ ಓಟ, ಉಪ್ಪು ಮುಡಿ ಓಟ, ಮೀನು ಹಿಡಿಯುವುದು, ಮಡಕೆಡೆಯುವುದು, ಲಿಂಬೆ ಚಮಚ, ಸೋಗೆಳೆಯುವುದು, ನಿಧಿ ಶೋಧ, ಹಗ್ಗಜಗ್ಗಾಟ, ಚೆಂಡೆಸೆತ, ರೀಲೆ ಈ ಎಲ್ಲಾ ಸ್ಪರ್ಧೆಗಳು ಕೆಸರಿನಲ್ಲಿ ನಡೆಯಲಿದೆ, ಮಾತ್ರವಲ್ಲದೇ ಗ್ರಾಮೀಣ ಕೃಷಿಯ ಕೆಲಸಗಳಾದ ಅಕ್ಕಿಮುಡಿ ಕಟ್ಟುವುದು, ಬೈಯುಲ್ಲಿನ ಹಗ್ಗ ತಯಾರಿ, ಬುಟ್ಟಿ ಹೆಣೆಯುವುದು, ತೆಂಗಿನ ಗರಿ ಹೆಣೆಯುವುದು, ತೆಂಗಿನ ಗರಿಯಿಂದ ಆಕೃತಿ ರಚನೆ ಮುಂತಾದ ಸ್ಪರ್ಧೆಗಳು ನಡೆಯಲಿದೆ.ವಿಶೇಷವಾಗಿ ಮನರಂಜನೆಗಾಗಿ ಕೋಣಗಳ ಓಟ, ಗ್ರಾಮೀಣ ಬದುಕಿನಲ್ಲಿ ಉಪಯೋಗಿಸುವ ವಸ್ತುಗಳ ಪ್ರದರ್ಶನ , ಬೈಲು ಮೀನುಗಳ ಪ್ರದರ್ಶನ ಜಾತಿ ಮತ ಮೀರಿ ಸೌಹಾರ್ದ ತೆಯನ್ನು ಸಾರುವ ಕುಡುಬಿ ಜನಾಂಗದ ನೃತ್ಯ , ಪಾರ್ಧನ, ಕೊಂಕಣಿ ನೃತ್ಯ , ಧಪ್ ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಬರುವ ಎಲ್ಲಾ ಜನರಿಗೆ ಗ್ರಾಮೀಣ ಸೊಬಗಿನ ಊಟದ ವ್ಯವಸ್ಥೆ ಮಾಡಲಾಗಿದೆ. ಐದು ಸಾವಿರಕ್ಕಿಂತ ಹೆಚ್ಚು ಜನರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮುನ್ನೂರು ಗ್ರಾಮಡೊಂಜಿಗೌಜಿ ಸ್ವಾಗತ ಸಮಿತಿ ಇದರ ಅಧ್ಯಕ್ಷ ರಘುಪತಿ ಡಿ, ಮಾತನಾಡಿ, ತೆರೆಮರೆಯಲ್ಲಿರು ಹಿಂದಿನ ಸಂಸ್ಕೃತಿಯನ್ನು ಯುವಸಮುದಾಯಕ್ಕೆ ತಿಳಿಸುವ ಪ್ರಯತ್ನ ಕಾರ್ಯಕ್ರಮದ್ದಾಗಿದೆ. ಸೌಹಾರ್ದತೆಯನ್ನು ಸಾರುವ ಕುಡುಬಿ ಸಮುದಾಯದ ನೃತ್ಯ, ಪಾರ್ಧನ, ಮುಸ್ಲಿಂ ಸಮುದಾಯದ ಸಂಸ್ಕೃತಿಗಳ  ಪರಿಚಯ   ಆಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. 
ಉಪಾಧ್ಯಕ್ಷರಾದ ಹರೀಶ್ ಮುಂಡೋಳಿ ಮಾತನಾಡಿ, ತುಳು ಜಾನಪದ, ಸಂಸ್ಕೃತಿ, ಕೀರ್ತಿಯ ವೈಭವವನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವಾಗಿದೆ. ಜಾನಪದ ಕ್ರೀಡೆ ಕಂಬಳದ ಮುಖೇನ ಕ್ರೀಡೆಗಳಿಗೂ ಚಾಲನೆ ನೀಡಲಿದ್ದೇವೆ.  ವಸ್ತು ಪ್ರದರ್ಶನ ಔಷಧೀಯ ಗಿಡಗಳ, ತುಳುನಾಡಿನ ಕೃಷಿ ಸಂಸ್ಕೃತಿಯ ಪರಿಕರಗಳ ಪರಿಚಯ  ಇಲ್ಲಿ ನಡೆಯಲಿದೆ ಎಂದರು.
ಉಪಾಧ್ಯಕ್ಷ ಮಹಾಬಲ ಟಿ. ದೆಪ್ಪೆಲಿಮಾರ್,  ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಕ್ರೀಡಾಕೂಟಗಳು ನಡೆದರೂ ಅದು ಒಂದುಧರ್ಮಕ್ಕೆ ಸೀಮಿತವಾಗಿ ನಡೆಯುತ್ತಿದೆ. ಆದರೆ ಮುನ್ನೂರು ಗ್ರಾಮದಲ್ಲಿ ಜರಗುವ  ಕಾರ್ಯಕ್ರಮ ಎಲ್ಲರಿಗೂ ಸೀಮಿತವಾಗಿದ್ದು, ಸೌಹಾರ್ದತೆಯನ್ನು ಬೆಸೆಯುವ ಕೊಂಡಿಯ ಕಾರ್ಯಕ್ರಮವಾಗಿದೆ. ಇದರಿಂದಲೇ ಎರಡು ವರ್ಷಗಳಲ್ಲೇ ಖ್ಯಾತಿಯನ್ನು ಗಳಿಸಿಕೊಂಡಿದೆ. ವಿವಿಧ ಭಾಷೆಗಳ, ಬೇರೆ ಬೇರೆ ಸಮುದಾಯದ ಸಂಸ್ಕೃತಿಯೊಂದಿಗೆ ಆಹಾರ ಖಾದ್ಯಗಳ ಪರಿಚಯವೂ ಇಲ್ಲಿ ಆಗಲಿದೆ ಎಂದರು.
ಕೋಶಾಧಿಕಾರಿ ಪೃಥ್ವಿ ರಾಜ್ ಕಬೇಕೋಡಿ,  ಜಯರಾಮ್ ಕುತ್ತಾರು ಉಪಸ್ಥಿತರಿದ್ದರು‌.

Exit mobile version