
ಮಂಜನಾಡಿ : ಎರಡು ದಿನಗಳೊಳಗಾಗಿ ಮಂಜನಾಡಿಯ ಆರಂಗಡಿ ಬಸ್ ನಿಲ್ದಾಣ ಬಳಿಯ ಮುಖ್ಯ ರಸ್ತೆಯನ್ನು ದುರಸ್ತಿಗೊಳಿಸದೇ ಇದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ನರಿಂಗಾನ, ಮಂಜನಾಡಿ ನಾಗರಿಕರು ಒತ್ತಾಯಿಸಿದ್ದಾರೆ.
ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 11ನೇ ವಾರ್ಡಿನ ಆರಂಗಡಿ ಬಸ್ ನಿಲ್ದಾಣ ಬಳಿಯ ಮುಖ್ಯರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನ ಸಂಚಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಒಂದು ವಾರದ ಹಿಂದೆಯೇ ಡಿವೈಎಫ್ ಐ ನಿಯೋಗ ಮಂಜನಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಲೋಕೋಪಯೋಗಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿಯ ಪ್ರತಿಯನ್ನು ತಲುಪಿಸುವಂತೆಯೂ ಸೂಚಿಸಿತ್ತು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಆದರೂ ರಸ್ತೆ ದುರಸ್ತಿ ಕಾಣದ ಹಿನ್ನೆಲೆಯಲ್ಲಿ
ನ.11 ರಂದು ಮಂಜನಾಡಿ ಮತ್ತು ನರಿಂಗಾನ ಗ್ರಾಮದ ನಾಗರಿಕರು ರಸ್ತೆಬದಿಯಲ್ಲಿ ನಿಂತು ಎರಡು ದಿನಗಳ ಅವಧಿಯಲ್ಲಿ ರಸ್ತೆಯನ್ನು ದುರಸ್ತಿಗೊಳಿಸದೇ ಇದ್ದಲ್ಲಿ ರಸ್ತೆ ಬಂದ್ ನಡೆಸಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.