Site icon Ullalavani

ಹಿಂದೂ ಮುಖಂಡಗೆ ಹಲ್ಲೆಗೈದ ಪ್ರಕರಣದಲ್ಲಿ ಬಿಡುಗಡೆಗೊಂಡ ಆರೋಪಿ ಕೊಲೆಯತ್ನ ಪ್ರಕರಣ : ಮೂವರ ಬಂಧನ

ಉಳ್ಳಾಲ: ಹಿಂದೂ ಮುಖಂಡನಿಗೆ ಹಲ್ಲೆ ನಡೆಸಿ ಜೈಲುಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಕಾಸರಗೋಡು ಬಡಾಜೆಯ ಮನೆಗೆ ಕಾರಿನಲ್ಲಿ ತೆರಳುತ್ತಿದ್ದ ಆಸೀಫ್, ಕಾರನ್ನು ತಡೆದು ತಲವಾರು ಬೀಸಿ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸುರತ್ಕಲ್ ಇಡ್ಯಾ ನಿವಾಸಿ ಅಣ್ಣಪ್ಪ ಸ್ವಾಮಿ(24), ನಾರ್ಲ ತಲಪಾಡಿಯ ಸಚಿನ್ (24) ಕಂಬ್ಳಪದವು ಪಾದಲ್ ಕೋಡಿಯ ಕುಶಿತ್ (18) ಬಂಧಿತರು.
ಬಂಧಿತರು ನ.8 ರಂದು ಸಂಜೆ 7.40ರ ಸಮಯಕ್ಕೆ ತಲಪಾಡಿಯ ಕೆ.ಸಿ.ರೋಡ್ -ಉಚ್ಚಿಲ ರಸ್ತೆಯಲ್ಲಿ ರಾ.ಹೆ.66ರ ಲ್ಲಿ ಆಸೀಫ್, ಸಹೋದರ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ತಲವಾರು ಬೀಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.10 ರಂದು ಪ್ರಕರಣ ದಾಖಲಾಗಿತ್ತು.

Exit mobile version