
ತೊಕ್ಕೊಟ್ಟು : ಕೋಲಾರದಲ್ಲಿ ನಡೆದ ರಾಜ್ಯಮಟ್ಟದ 4×400 ಮೀಟರ್ ರಿಲೇ ತಂಡದಲ್ಲಿ ದಕ್ಷಿಣ ಕನ್ನಡದಿಂದ ಸ್ಪರ್ಧಿಸಿದ ತೊಕ್ಕೊಟ್ಟು ಪೆರ್ಮನ್ನೂರಿನ ಸೈಂಟ್ ಸೆಬ್ಯಾಸ್ತಿಯನ್ ಆಂಗ್ಲ ಮಾಧ್ಯಮ ಶಾಲೆಯ ಎಸ್ ಎಸ್‌ಎಲ್‌ಸಿ ವಿದ್ಯಾರ್ಥಿ ಆಡಿನ್ ಪ್ರಿನ್ಸನ್ ಡಿಸೋಜಾ ಅಂಡರ್ 17 ನಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಕರ್ನಾಟಕ ರಾಜ್ಯದ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪೆರ್ಮನ್ನೂರಿನ ಹೆಮ್ಮೆಯ ಪ್ರತಿಭಾನ್ವಿತ ಕ್ರೀಡಾಪಟು ಆಡಿನ್ ಪ್ರಿನ್ಸನ್ ಡಿಸೋಜಾ ಇವರು ಪ್ರವೀಣ್ ಕುಮಾರ್ ಹಾಗೂ ಭಕ್ಷಿತ್ ಸಾಲ್ಯಾನ್ ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಶಾಲಾ ಸಂಚಾಲಕರಾದ ಫಾದರ್ ಸಿಪ್ರಿಯನ್ ಪಿಂಟೋ ಸೇರಿದಂತೆ ಮುಖ್ಯೋಪಾಧ್ಯಾಯನಿ ಭಗಿನಿ ಜ್ಯೋತಿಕ ಬಿ ಎಸ್, ಶಿಕ್ಷಕ ಶಿಕ್ಷಕೇತರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿ ಬಳಗ ಅಭಿನಂದಿಸಿದ್ದಾರೆ.
ಇವರು ರಾಣಿಪುರ ನಿವಾಸಿ ಲ್ಯಾನ್ಸಿ ಡಿಸೋಜ ಮತ್ತು ಅನಿತಾ ದಂಪತಿ ಪುತ್ರನಾಗಿದ್ದಾರೆ.,.