Site icon Ullalavani

ಬೆಳ್ಮ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿರುದ್ಧ ಕೋಟೆಕಾರು ಪ.ಪಂ. ಮುಖ್ಯಾಧಿಕಾರಿಯಿಂದ ಜಿಲ್ಲಾಧಿಕಾರಿ, ಪರಿಸರ ಅಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು

ಕೋಟೆಕಾರು: ಬೆಳ್ಮ ಪಂಚಾಯತ್ ವ್ಯಾಪ್ತಿಯ ವಾಣಿಜ್ಯ ಕಟ್ಟಡದ ತ್ಯಾಜ್ಯ ನೀರನ್ನು ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಹರಿಯಬಿಡುತ್ತಿರುವ ವಿರುದ್ಧ ಕೋಟೆಕಾರು ಪಟ್ಟಣ ಪಂಚಾಯತ್ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂಧನೆ ಸಿಗದ ಹಿನ್ನೆಲೆಯಲ್ಲಿ ಬೆಳ್ಮ ಪಂ. ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು, ಪರಿಸರ ಅಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದೆ.
2022 ರ ಸೆ.26 ಕ್ಕೆ ಕೋಟೆಕಾರು ಪಟ್ಟಣ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮೊದಲ ಪತ್ರವನ್ನು ಕಳುಹಿಸಲಾಗಿತ್ತು.
2022ರ, ಅ.14 ರಂದು ಎರಡನೇ ಬಾರಿ ಪತ್ರವನ್ನು ಬರೆಯಲಾಗಿತ್ತು. ಆದರೂ ಸ್ಪಂದನೆ ಸಿಗಲಿಲ್ಲದ ಹಿನ್ನೆಲೆಯಲ್ಲಿ ಮತ್ತೆ ಮೂರನೇ ಬಾರಿಯಾಗಿ ನ.2 ರಂದು ಮತ್ತೊಮ್ಮೆ ಮನವಿ ಸಲ್ಲಿಸಲಾಯಿತು. ಅದಕ್ಕೂ ಏನೂ ಪ್ರತಿಕ್ರಿಯೆ ಸಿಗದೇ ಇದ್ದಾಗ 2022 ರ ಡಿ.8 ರಂದು ಕೊನೇಯ ಪತ್ರ ಬರೆದ ನಂತರ ಡಿ.13 ರಂದು ಜಿಲ್ಲಾ ಪಂಚಾಯತ್ ಗೆ ಮನವಿಯನ್ನು ಸಲ್ಲಿಸಲಾಯಿತು. ಬೆನ್ನು ಬೆನ್ನಿಗೇ ಪತ್ರಗಳನ್ನು ಬರೆದರೂ ಬೆಳ್ಮ ಗ್ರಾಮ ಪಂಚಾಯತ್ ಆಡಳಿತವಾಗಲಿ, ಅಧಿಕಾರಿ ವರ್ಗವಾಗಲಿ ಪ್ರತಿಕ್ರಿಯೆನೇ ನಡೆಸಲಿಲ್ಲ.
ಇದೀಗ ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಮೂರು ವರ್ಷಗಳ ನಂತರ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ತಕ್ಷಣವೇ ಅಧಿಕೃತವಾಗಿ ಮತ್ತೊಮ್ಮೆ ಪತ್ರವನ್ನು ಜಿಲ್ಲಾಧಿಕಾರಿ, ಪರಿಸರ ಅಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬರೆದು ದೂರು ಸಲ್ಲಿಸಲಾಗಿದೆ.
ಬೆಳ್ಮ ಗ್ರಾ.ಪಂ ವ್ಯಾಪ್ತಿಯ ವಾಣಿಜ್ಯ ಕಟ್ಟಡದ ತ್ಯಾಜ್ಯ ನೀರನ್ನು ಲೋಕೋಪಯೋಗಿ ಮಳೆ ನೀರಿನ ಚರಂಡಿಯ ಮೂಲಕ ಕೋಟೆಕಾರು ಪ.ಪಂ ವ್ಯಾಪ್ತಿಗೆ ಹರಿಯಬಿಡಲಾಗುತ್ತಿದೆ. ಇದರಿಂದ ಪ್ರದೇಶದಲ್ಲಿ ತ್ಯಾಜ್ಯ ನೀರು ಸಂಗ್ರಹಣೆಗೊAಡು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ಈಗಾಗಲೇ ಕಚೇರಿಗೆ ಹಲವು ದೂರುಗಳು ಹಾಗೂ ದೂರವಾಣಿ ಕರೆಗಳು ಬರುತ್ತಿದೆ. ವಾಣಿಜ್ಯ ಕಟ್ಟಡದ ತ್ಯಾಜ್ಯ ನೀರು ಕೋಟೆಕಾರು ವ್ಯಾಪ್ತಿಗೆ ಹರಿಯುವುದು ಸ್ಥಳ ತನಿಖೆಯಿಂದ ಕಂಡುಬAದಿದೆ. ಆದುದರಿಂದ ಸಮಸ್ಯೆಯನ್ನು ಬಗೆಹರಿಸಲು ಹಾಗೂ ನೈರ್ಮಲ್ಯ ಮುಕ್ತ ಪ್ರದೇಶಕ್ಕಾಗಿ, ತ್ಯಾಜ್ಯ ನೀರು ಕೋಟೆಕಾರು ವ್ಯಾಪ್ತಿಗೆ ಹರಿಯದಂತೆ ಸೂಕ್ತ ಕ್ರಮಕೈಗೊಳ್ಳಲು ಬೆಳ್ಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇವರಿಗೆ ಮೂರು ಬಾರಿ ದೂರು ನೀಡಿದರೂ ಕ್ರಮಕೈಗೊಂಡಿರುವುದಿಲ್ಲ. ಮತ್ತೆ ಸಾರ್ವಜನಿಕರಿಂದ ನಿರಂತರ ದೂರುಗಳು ಹಾಗೂ ದೂರವಾಣಿ ಕರೆಗಳು ಕೋಟೆಕಾರು ಪ.ಪಂ ವ್ಯಾಪ್ತಿಗೆ ಬರುತ್ತಲೇ ಇದೆ. ಈ ಬಗ್ಗೆ ಬೆಳ್ಮ ಗ್ರಾಮಪಂಚಾಯತ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳು ನಿರ್ದೇಶನ ನೀಡಬೇಕೆಂದು ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

Exit mobile version