Site icon Ullalavani

ಕತ್ತಲಲ್ಲಿ ಉಳ್ಳಾಲ ತಾಲೂಕು ಸರ್ವೇಯರ್‌ ಗಳ ಕಚೇರಿಬಿಲ್‌ ಕಟ್ಟದೇ ವಿದ್ಯುತ್‌ ಡಿಸ್‌ಕನೆಕ್ಟ್‌ , ಬಾಡಿಗೆಯೂ ಕಟ್ಟಿಲ್ಲ

ಉಳ್ಳಾಲ: ಇಲ್ಲಿನ ನಾಟೆಕಲ್‌ ನಲ್ಲಿ ಇರುವ ಉಳ್ಳಾಲ ತಾಲೂಕು ಸರ್ವೇಯರ್‌ ಗಳ ಕಚೇರಿ ಮೆಸ್ಕಾಂ ಬಿಲ್‌ ಪಾವತಿಸದೇ ಕತ್ತಲಿನಿಂದ ತುಂಬಿದೆ, ಮ್ಯಾನುವೆಲ್‌ ಆಉಗಿ ಫೈಲ್‌ ವಿಲೇವಾರಿ ನಡೆಯುತ್ತಿದೆಯೇ ಹೊರತು ಇಫೈಲಿಂಗ್‌ ಪ್ರಕ್ರಿಯೆ ಸ್ಥಗಿತಗೊಂಡು ವಾರಗಳೆ ಕಳೆದಿವೆ.


ನಾಟೆಕಲ್‌ ಸಮೀಪ ಖಾಸಗಿ ಕಟ್ಟಡದಲ್ಲಿ ಭೂದಾಖಲೆಗಳ ಸಹಾಯಕ ನಿದೇಶಕರ ಕಚೇರಿ ಸರ್ವೇಯರ್‌ ಸೆಕ್ಷನ್‌ ೨೦೦ ಚದರ ಅಡಿ ಕೊಠಡಿಯೊಂದರಲ್ಲಿ ಬಾಡಿಗೆಯನ್ನು ಪಡೆಯಲಾಗಿದೆ. ಉಳ್ಳಾಲ ತಾಲೂಕು ಘೋಷಣೆಯಾದ ಎರಡು ವರ್ಷಗಳ ಹಿಂದೆ ಕಚೇರಿ ಮಂಗಳೂರಿನಿಂದ ನಾಟೆಕಲ್‌ ಗೆ ವರ್ಗಾವಣೆಗೊಂಡಿತ್ತು. ೫ ಸರಕಾರಿ ಸರ್ವೇಯರ್‌ , ೧೭ ಖಾಸಗಿ, ೧ ಎಡಿಎಲ್‌ ಆರ್‌, ೧ ಸುಪರ್‌ ವೈಸರ್‌ ಇರುವ ಕಚೇರಿಯಲ್ಲಿ ಕನಿಷ್ಠ ಮೂರು ಮಂದಿಗೆ ಕುಳಿತುಕೊಳ್ಳಲು ಕಷ್ಟ ಅನ್ನುವ ಮಾತುಗಳು ಕೇಳಿಬಂದಿದೆ. ಖಾಸಗಿ ಕೊಠಡಿಯಾಗಿರುವುದರಿಂದ ತಿಂಗಳಿಗೆ ರೂ.೧೦,೦೦೦ ಬಾಡಿಗೆಯನ್ನು ಈವರತೆಗೆ ಸರ್ವೇಯರ್‌ ತಮ್ಮ ಕೈಯಿಂದಲೇ ಭರಿಸುತ್ತಿದ್ದರು. ಆದರೆ ಕಳೆದ ೮ ತಿಂಗಳಿನಿಂದ ಅವರಲ್ಲಿಯೂ ಪಾವತಿಸಲು ಹಣವಿಲ್ಲದೇ ಇರುವುದರಿಂದ ಬಾಡಿಗೆಯನ್ನು ಕಟ್ಟಲಿಲ್ಲ. ಇದರಿಂದ ಸಾವಿರಾರು ರೂ. ಬಾಡಿಗೆ ಬಾಕಿಯಿದೆ. ಈ ನಡುವೆ ರೂ.೧೯,೫೦೦ ವಿದ್ಯುತ್‌ ಬಿಲ್‌ ಬಾಕಿಯಿದ್ದು, ಕೆಲ ದಿನಗಳಿಂದ ವಿದ್ಯುತ್‌ ಕನೆಕ್ಷನನ್ನೇ ಸ್ಥಗಿತಗೊಳಿಸಲಾಗಿದೆ. ಇದರಿಂದ ಜನಸಾಮಾನ್ಯರ ಕೆಲಸಗಳು ಸರಿಯಾಗಿ ನಿರ್ವಹಣೆಯಾಗದೆ ಕಡತಗಳು ಬಾಕಿಯುಳಿದಿವೆ ಅನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದೆ. ಕಂಪ್ಯೂಟರ್‌ ಸೆಕ್ಷನ್‌ ಅಂತೂ ಕಾರ್ಯನಿರ್ವಹಿಸದೆ ಇಫೈಲಿಂಗ್‌ ಪ್ರಕ್ರಿಯೆಗಳೇ ನಿಂತುಹೋಗಿವೆ. ಇದೀಗ ವಿದ್ಯುತ್‌ ತೆಗೆಯಲಾಗಿದೆ, ಬಆಡಿಗೆ ಕೊಡದ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರು ಕೊಠಡಿಯನ್ನೇ ಏಕಾಏಕಿ ಖಾಲಿಗೊಳಿಸಿದಲ್ಲಿ ಸಾರ್ವಜನಿಕರ ಕಡತಗಳು ಕಳೆದುಹೋಗಬಹುದು ಅನ್ನುವ ಆರೋಪಗಳು ಕೇಳಿಬಂದಿದೆ.

Exit mobile version