ತೊಕ್ಕೊಟ್ಟು : ಮಾರ್ಗ ಮಧ್ಯೆ ಕೆಟ್ಟು ನಿಂತ ಕೆಎಸ್ ಆರ್ ಟಿಸಿ ಬಸ್ಸನ್ನು ತಪ್ಪಿಸುವ ಧಾವಂತದಲ್ಲಿ ಟೆಂಪೋ ಚಾಲಕ ನಿಯಂತ್ರಣ ಕಳೆದು ಬಸ್ಸಿನಿಂದ ಕೆಳಗಿಳಿಯುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲ್ಲಾಪು ಆಡಂಕುದ್ರು ರಾ.ಹೆ.66 ರಲ್ಲಿ ಮಧ್ಯಾಹ್ನ ವೇಳೆ ಸಂಭವಿಸಿದೆ. ಟೆಂಪೋ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಇಲೆಕ್ಟಿçಕ್ ಕಾರಿಗೂ ಢಿಕ್ಕಿ ಹೊಡೆದು, ಸಮೀಪದ ಅಂಗಡಿ ನಾಮಫಲಕಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ.
ಫರಂಗಿಪೇಟೆ ತುಂಬೆ ರೊಟ್ಟಿಗುಡ್ಡೆ ಮನೆಯ ಆದಂ (64) ಸಾವನ್ನಪ್ಪಿದವರು. ಮಂಗಳೂರಿನಿAದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮಾರ್ಗಮಧ್ಯೆ ಕೆಟ್ಟು ನಿಂತಿತ್ತು. ಅದೇ ಮಾರ್ಗವಾಗಿ ತೆರಳುತ್ತಿದ್ದ ಇಂಟರ್ ಲಾಕ್ ಲೋಡ್ ಹೊತ್ತಿದ್ದ ಟೆಂಪೋ ಲಾರಿ ಎದುರಿನಲ್ಲಿ ಬಸ್ ನಿಂತಿರುವುದನ್ನು ತಪ್ಪಿಸುವ ಧಾವಂತದಲ್ಲಿ ನಿಯಂತ್ರಣ ಕಳೆದುಕೊಂಡು ಎಡಗಡೆಗೆ ತಿರುಗಿಸಿದ್ದು, ಈ ವೇಳೆ ಕಟ್ಟುನಿಂತ ಬಸ್ಸಿನಿಂದ ಇಳಿದು ಬೇರೆ ಬಸ್ಸನ್ನೇರಲು ಮುಂದಾಗುತ್ತಿದ್ದ ಮೊಹಮ್ಮದ್ ಹುಸೈನ್ ಅವರಿಗೆ ಟೆಂಪೋ ಢಿಕ್ಕಿ ಹೊಡೆದಿದೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಎದುರಿನಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟಿçಕ್ ಕಾರಿಗೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿ ಮಕ್ಕಳು ಕುಳಿತಿದ್ದು , ಚಾಲಕ ಹಾಟ್ ಚಿಪ್ಸ್ ಅಂಗಡಿಗೆ ತೆರಳಿದ್ದರು. ಅದೃಷ್ಟವಶಾತ್ ಮಕ್ಕಳು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
