ದೇರಳಕಟ್ಟೆ : ಇಲ್ಲಿನ ಪಾನೀರು ಅಂಗನವಾಡಿ ಸಮೀಪ ಚಿರತೆ ಕಂಡುಬAದಿದ್ದು, ಈ ಕುರಿತು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಂಗನವಾಡಿ ಆಸುಪಾಸಿನಲ್ಲಿ ಚಿರತೆಯ ಹೆಜ್ಜೆಯ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಸಮೀಪದ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಚಿರತೆ ದಾರಿಯಾಗಿ ಹೋಗುತ್ತಿರುವ ದೃಶ್ಯ ಸೆರೆಯಾಗಿರುವುದು ಪತ್ತೆಯಾಗಿದೆ. ಈ ಕುರಿತು ಅಂಗನವಾಡಿ ಸ್ಥಳೀಯರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆ ಪ್ರತ್ಯಕ್ಷದಿಂದ ಮಡ್ಯಾರು, ಮಾಡೂರು, ದೇರಳಕಟ್ಟೆ ನಿವಾಸಿಗಳು ಆತಂಕಗೊಂಡಿದ್ದಾರೆ.
ಎಚ್ಚರಿಕೆಯ ವಾಯ್ಸ್ ಮೆಸೇಜ್
ಕೋಟೆಕಾರು ಪಟ್ಟಣ ಪಂಚಾಯತ್ ನ 11 ನೇ ವಾರ್ಡಿನ ಪಾನೀರುನಲ್ಲಿರುವ ಕಾಂಗ್ರೆಸ್ ಮುಖಂಡ ಆಲ್ವಿನ್ ಎಂಬವರ ಕಂಪೌಂಡ್ ಮನೆ ಮುಂದೆ ಸಾಗಿರುವ ಚಿರತೆ, ಇನ್ಸು ಟೀಚರ್ ಎಂಬವರಿಗೆ ಸೇರಿದ ಗಿಡಗಂಟೆಗಳಿರುವ ಖಾಲಿ ಜಾಗದ ಒಳಕ್ಕೆ ನುಸುಳಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಜಾಗೃತೆಯಿಂದ ಇರಲು ವಾಯ್ಸ್ ಮೆಸೇಜ್ ಮೂಲಕ ಪ್ರತ್ಯಕ್ಷದರ್ಶಿ ಮನವಿ ಮಾಡಿಕೊಂಡಿದ್ದಾರೆ. ತ್ಯಾಜ್ಯ ಎಸೆಯುವುದು ಈ ಭಾಗದಲ್ಲಿ ಜಾಸ್ತಿಯಾಗುತ್ತಿರುವುದರಿಂದ ಅದನ್ನು ತಿನ್ನಲೆಂದು ಕಾಡಿನಲ್ಲಿರುವ ಚಿರತೆ ಈ ಭಾಗಕ್ಕೆ ಬಂದಿರುವ ಶಂಕೆಯನ್ನು ವಾಯ್ಸ್ ಮೆಸೇಜ್ ಮೂಲಕ ವ್ಯಕ್ತಪಡಿಸಿದ್ದಾರೆ.