ತಲಪಾಡಿ: ತಲಪಾಡಿಯ ಖ್ಯಾತ ಬಾಣಸಿಗ, ಕಬ್ಬಡ್ಡಿ ಪಟು , ಸಹಾಯಕ ಅರ್ಚಕ ಶ್ರೀಹರಿ ಭಟ್ (53) ಹೃದಯಾಘಾತಕ್ಕೊಳಗಾಗಿ ಭಾನುವಾರ ಸಂಜೆ ನಿಧನ ಹೊಂದಿದ್ದಾರೆ.
ಉತ್ತಮ ಕಬ್ಬಡ್ಡಿ ಪಟುವಾಗಿದ್ದ ಅವರು ಖ್ಯಾತ ಪಾಕತಜ್ಞರೂ ಹೌದು. ಉಳ್ಳಾಲ ಭಾಗದ ದೇವಸ್ಥಾನಗಳಲ್ಲಿ ಸೇರಿದಂತೆ ಕೊಲ್ಯ ಮೂಕಾಂಬಿಕಾ ದೇವಸ್ಥಾನ, ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಾಣಸಿಗರಾಗಿ ಹಲವು ವರ್ಷಗಳ ಕಾಲ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ದೇವಿಪುರ ತಲಪಾಡಿಯ ದುರ್ಗಾಪರಮೇಶ್ವರಿ ಯುವಕ ಸಂಘ ಸಕ್ರಿಯ, ಅವಿನಾಶಿ ಭಜನಾ ಮಂದಿರ ಸದಸ್ಯರಾಗಿ ಶಿವಳ್ಳಿ ಸ್ಪಂಧನಾ ಮಾಜಿ ಅಧ್ಯಕ್ಷರಾಗಿಯೂ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ಅವರು ಪತ್ನಿ ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.