Site icon Ullalavani

ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ ಇಡೀ ಊರಿಗೆ ಆದರ್ಶ : ಪವಿತ್ರ ಕುಮಾರ್ ಗಟ್ಟಿ

ಉಳ್ಳಾಲ: ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ ಇಡೀ ಊರಿಗೆ ಆದರ್ಶವಾಗಿದೆ. 25 ನೇ ವರ್ಷದ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಸಂಘಟನೆ ಸ್ವಂತ ಕಟ್ಟಡದ ದಶಮಾನೋತ್ಸವವನ್ನು ಆಚರಿಸುತ್ತಿದೆ. ಬೆಳ್ಳಿಹಬ್ಬದ ಪ್ರಯುಕ್ತ 12 ತಿಂಗಳಿಗೆ ವಿವಿಧ 12 ಕಾರ್ಯಕ್ರಮಗಳನ್ನು ಆಯೋಜಿಸಿವ ಮೂಲಕ ಮಾದರಿಯಾಗಿದೆ ಎಂದು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇದರ ಪ್ರ.ಕಾ ಹಾಗೂ ದುರ್ಗಾವಾಹಿನಿ ಮಹಿಳಾ ಮಂಡಲದ ಗೌರವ ಸಲಹೆಗಾರ ಪವಿತ್ರ ಗಟ್ಟಿ ಕುತ್ತಾರ್ ಹೇಳಿದರು.
ಅವರು ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
10ನೇ ತಿಂಗಳ 10ನೇ ಕಾರ್ಯಕ್ರಮವಾದ ಕ್ರೀಡಾಕೂಟವನ್ನು ಮಹಿಳಾ ಮಂಡಳಿ ಹಮ್ಮಿಕೊಂಡಿದೆ. ನ.24 ರಂದು ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ರಾತ್ರಿ ಹಗಲು ದುಡಿದ ಎಲ್ಲಾ ಮಹಿಳಾ ಕರ‍್ಯಕರ್ತೆಯರಿಗೆ ದೈವ ದೇವರು ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯ ಶಿಶು ಶಿಕ್ಷಣ ವಿಭಾಗ ಮುಖ್ಯಸ್ಥೆ ಉಜ್ವಲ್ ರಾಜೇಶ್ ಮಾತನಾಡಿ, ಕ್ರೀಡೆಯಲ್ಲಿ ವಿಜೇತರಾಗುವುದು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಭಾನುವಾರವಾದರೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ದುರ್ಗಾವಾಹಿನಿ ಮಹಿಳಾ ಮಂಡಲದ ಮಹತ್ವವನ್ನು ಎತ್ತಿಹಿಡಿದಿದ್ದಾರೆ ಎಂದರು.
ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದ ಅಧ್ಯಕ್ಷೆ ಸುನಿತಾ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರದಾ ನಾಯರ್, ಕೋಶಾಧಿಕಾರಿ ಶ್ರುತಾ, ವೇದ ಪವಿತ್ರ ಗಟ್ಟಿ ಉಪಕಾರ್ಯದರ್ಶಿ ದಿವ್ಯಾ ಉಪಸ್ಥಿತರಿದ್ದರು.
ದುರ್ಗಾವಾಹಿನಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ಮುಖಂಡೆ ಧನಲಕ್ಷಿö್ಮÃ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರ.ಕಾ ಶಶಿಕಲಾ ಗಟ್ಟಿ ಕುತ್ತಾರು ವಂದಿಸಿದರು.

Exit mobile version