Site icon Ullalavani

ಪಾದಚಾರಿಗೆ ಮೂವರಿದ್ದ ಬೈಕ್ ಢಿಕ್ಕಿ

ಕುತ್ತಾರು : ರಸ್ತೆ ದಾಟುತ್ತಿದ್ದ ಹಿರಿಯ ನಾಗರಿಕ ಪಾದಚಾರಿಗೆ ಮೂವರು ಸಂಚರಿಸುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ಕುತ್ತಾರು ವೆಜಿನೇಷನ್ ಹಾಗೂ ಅಪೋಲೋ ಮೆಡಿಕಲ್ ಎದುರುಗಡೆ ಗುರುವಾರ ಸಂಜೆ ವೇಳೆ ಸಂಭವಿಸಿದೆ.
ಸಂತೋಷನಗರ ನಿವಾಸಿ ಚಂದ್ರಹಾಸ್ (74) ಗಾಯಗೊಂಡವರು. ಮನೆಗೆ ತೆರಳಲು ರಸ್ತೆ ದಾಟುವ ಸಂದರ್ಭ ಕುತ್ತಾರು ಕಡೆಯಿಂದ ತೊಕ್ಕೊಟ್ಟುವಿನತ್ತ ತೆರಳುತ್ತಿದ್ದ ಮೂವರಿದ್ದ ಸ್ಕೂಟರ್ ಢಿಕ್ಕಿ ಹೊಡೆದಿದೆ. ಘಟನೆಗೆ ಸ್ಕೂಟರ್ ಸವಾರರ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version