Site icon Ullalavani

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಿಂದಆಲ್ವಿನ್ ಡಿಸೋಜ ಗೆ ಸನ್ಮಾನ

ಉಳ್ಳಾಲ: ಆಲ್ ಇಂಡಿಯಾ ಕೆಥೋಲಿಕ್ ಸಭಾ ದ ಕರ್ನಾಟಕ ಪ್ರಾಂತ ಅಧ್ಯಕ್ಷರಾಗಿ ಆಯ್ಕೆಯಾದ ಆಲ್ವಿನ್ ಡಿಸೋಜ ಇವರನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದುಕೊಂಡು ಮೈನಾರಿಟಿ ಘಟಕವನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಆಲ್ವಿನ್ ಫಾತ್ರ ಮಹತ್ವದ್ದು, ಇದೀಗ ಚುನಾವಣೆ ಮೂಲಕ ಕೆಥೋಲಿಕ್ ಸಭಾದ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಅವರ ಸೇವಾ ಅವಧಿಯಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಹಾಗೂ ಇನ್ನಷ್ಟು ಉನ್ನತ ಹುದ್ದೆಗಳು ಅವರ ಪಾಲಿಗೆ ಒದಗಿ ಬರಲಿ ಎಂದರು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ , ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಕೆಥೋಲಿಕ್ ಮಹಾಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ, ಕ್ಷೇತ್ರ ವಕ್ತಾರ ಅಶ್ರಫ್ ಕೆ.ಸಿ.ರೋಡ್, ಉಳ್ಳಾಲ ನಗರಸಭೆ ಮಾಜಿ ಅಧ್ಯಕ್ಷ ದಿನೇಶ್ ರೈ, ಮಹಿಳಾ ಕಾಂಗ್ರೆಸ್ ಕ್ಷೇತ್ರ ಅಧ್ಯಕ್ಷೆ ಚಂದ್ರಿಕಾ ರೈ, ಮುನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ವಿಲ್ಫೆçಡ್ ಡಿಸೋಜ, ಬ್ಲಾಕ್ ರ‍್ಯದರ್ಶಿ ಮನ್ಸೂರ್ ಮಂಚಿಲ ಉಪಸ್ಥಿತರಿದ್ದರು.

Exit mobile version