Site icon Ullalavani

ಕಣಚೂರು ಪಬ್ಲಿಕ್ ಸ್ಕೂಲ್‌ಗೆ ಎಲ್ಡ್ರಾಕ್ ಇಂಡಿಯಾ ಕೆ-12 ಎಕ್ಸ್ಪೋದಲ್ಲಿ ಉತ್ತಮ ಶಾಲಾ ಪ್ರಶಸ್ತಿ

ನಾಟೆಕಲ್ : ಬೆಂಗಳೂರಿನ ವೈಟ್ ಫೀಲ್ಡ್ ಕೆಟಿಪಿಓದಲ್ಲಿ ಇತ್ತೀಚೆಗೆ ಆಯೋಜಿಸಿಲಾದ ಎಲ್ಡಾçಕ್ ಇಂಡಿಯಾ ಕೆ-12 ಎಕ್ಸ್ಪೋ, 2024 ದಲ್ಲಿ ನಾಟೆಕಲ್ ಕಣಚೂರು ಪಬ್ಲಿಕ್ ಸ್ಕೂಲ್ ` ಜೀವನ ಕೌಶಲ್ಯಗಳು ಮತ್ತು ಚಟುವಟಿಕೆ ಆಧಾರಿತ ಕಲಿಕೆ ‘ ವಿಷಯದಲ್ಲಿ ಉತ್ತಮ ಶಾಲೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಎರಡು ದಿನಗಳ ಎಕ್ಸ್ ಪೋದಲ್ಲಿ ದಕ್ಷಿಣ ಭಾರತದ ಪ್ರಮುಖ ಶಾಲೆಗಳ ಪ್ರಾಂಶುಪಾಲರು , ನಿರ್ದೇಶಕರು, ಉದ್ಯಮಿಗಳು , ಪ್ರಸಿದ್ಧ ಚಿಂತಕರುಗಳು, ಕಾರ್ಪೋರೇಟ್ ಕಾರ್ಯನಿರ್ವಾಹಕರು, ಸರ್ಕಾರದ ಅಧಿಕಾರಿಗಳು, ಸಲಹೆಗಾರರು ಭಾಗಿಯಾಗಿದ್ದು, ಅವರ ಜೊತೆಗೆ ಮುಖಾಮುಖಿ ಸಂವಹನ ಹಾಗೂ ಚರ್ಚೆಗಳಿಗೆ ವೇದಿಕೆಯನ್ನು ಒದಗಿಸಿತ್ತು. ಕಣಚೂರು ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಕ್ಯಾರೆನ್ ಡಿಸೋಜ ಪ್ರಶಸ್ತಿಯನ್ನು ಆಯೋಜಕರಿಂದ ಪಡೆದುಕೊಂಡರು.

Exit mobile version