Site icon Ullalavani

`ಬೇಡಿಕೆಗಳು ಈಡೇರಿವೆ ಆಗಾಗ್ಗ ಬರುತ್ತಾ ಇರುವೆ ‘ : ನಟಿ ರಕ್ಷಿತಾ ಪ್ರೇಮ್ ಆದಿಸ್ಥಳ ಕುತ್ತಾರು ದೆಕ್ಕಾಡು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ

ಕುತ್ತಾರು: ನಟ ಹಾಗೂ ನಿರ್ದೇಶಕ ಪ್ರೇಮ್ ಮತ್ತು ನಟಿ ರಕ್ಷಿತಾ ದಂಪತಿ ದೆಕ್ಕಾಡು ಕೊರಗಜ್ಜನ ಕ್ಷೇತ್ರಕ್ಕೆ ಅ.೫ ರಂದು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದಾರಿಮಧ್ಯೆ ಅಜ್ಜನಿಗೆ ಹರಕೆ ರೂಪದಲ್ಲಿ ಇಡುವ ಎಲೆಅಡಿಕೆ ಮತ್ತು ಚಕ್ಕುಲಿ ಖರೀದಿಸುವವರಲ್ಲಿ ಅಜ್ಜನ ಕಟ್ಟೆಗೆ ಆಗಾಗ್ಗೆ ಭೇಟಿ ಕೊಡುತ್ತಿರುವೆ, ಬೇಡಿಕೆಗಳು ಈಡೇರುತ್ತಿವೆ, ಮನಶಾಂತಿಗಾಗಿ ಬರುತ್ತಿರುವೆ ಎಂದಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಈ ಹಿಂದೆಯೂ ಅಜ್ಜನ ಕಟ್ಟೆಗೆ ಹಲವು ಬಾರಿ ಭೇಟಿಯನ್ನು ಕೊಟ್ಟಿದ್ದರು. ಈ ಬಾರಿ ದಂಪತಿ ಸಮೇತರಾಗಿ ಆಗಮಿಸಿದ್ದು, ಸಂದರ್ಶನ ನಡೆಸಿ ವಾಪಸ್ಸಾಗಿದ್ದಾರೆ. ಈ ನಡುವೆ ಅಂಗಡಿ ಸಮೀಪ ಹರಕೆ ವಸ್ತುಗಳನ್ನು ಖರೀದಿಸಲೆಂದು ನಿಂತಾಗ , ಅಂಗಡಿಯವರು ನಟಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ತನ್ನ ಹಲವು ಭೇಟಿಗಳ ಕುರಿತು ವಿವರಿಸಿದ್ದಾರೆ. ಅಲ್ಲದೆ ಬೇಡಿಕೆಗಳು ಈಡೇರುತ್ತಿವೆ ಅದರಿಂದ ಮನಶಾಂತಿಯಿದೆ. ಈ ನಿಟ್ಟಿನಲ್ಲಿ ಆಗಾಗ್ಗ ಭೇಟಿ ಕೊಡುತ್ತಿರುವೆ ಎಂದಿದ್ದಾರೆ.
ಈ ಸಂದರ್ಭ ಸ್ವಾಮಿಕೊರಗಜ್ಜ ದೈವದ ಆದಿಸ್ಥಳ ದೆಕ್ಕಾಡು ಕುತ್ತಾರು ಸಂಬAಧಿಸಿದ ಟ್ರಸ್ಟ್ ವತಿಯಿಂದ ದಂಪತಿಯನ್ನು ಅಭಿನಂದಿಸಲಾಯಿತು.

Exit mobile version