Site icon Ullalavani

ಅಡ್ಯಾರ್ ಕಟ್ಟೆ: ಕೆಥೋಲಿಕ್ ಸಭಾ ಅಧ್ಯಕ್ಷರ ಮೇಲೆ ಹಲ್ಲೆ ಮರಳು ದಂಧೆಕೋರರ ಕೃತ್ಯ ಆರೋಪ, ಸ್ಪೀಕರ್ ಖಾದರ್, ಎಂಎಲ್ ಸಿ ಐವನ್ ಡಿಸೋಜ ಖಂಡನೆ

ಮAಗಳೂರು: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ದೇರಳಕಟ್ಟೆ ಪಾನೀರು ನಿವಾಸಿ ಆಲ್ವಿನ್ ಜೆರೋಮ್ ಡಿಸೋಜಾ(೫೦) ಎಂಬವರ ಮೇಲೆ ೧೦ ರಿಂದ ೧೫ ಮಂದಿಯ ತಂಡ ಅಡ್ಯಾರ್ ಕಟ್ಟೆ ಸಮೀಪ ಹಲ್ಲೆ ನಡೆಸಿರುವ ಘಟನೆ ಇಂದು ಮಧ್ಯಾಹ್ನ ವೇಳೆ ಸಂಭವಿಸಿದ್ದು, ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಅಕ್ರಮ ಮರಳು ದಂಧೆಯ ಪ್ರತಿಭಟನೆಯಲ್ಲಿ ಆಲ್ವಿನ್ ಮುಂಚೂಣಿಯಲ್ಲಿದ್ದರು. ಕೃತ್ಯವನ್ನು ಉಳ್ಳಾಲ ಶಾಸಕ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಖಂಡಿಸಿದ್ದಾರೆ.
ಅಡ್ಯಾರ್ ಕಟ್ಟೆ ಮರಳಿನ ಗಣಿಗಾರಿಕೆ ಸ್ಥಳದ ಸಮೀಪ ಘಟನೆ ಸಂಭವಿಸಿದೆ, ಅಲ್ಲಿ ಕಾನೂನುಬಾಹಿರ ಗಣಿಗಾರಿಕೆ ನಡೆಸಲು ಬಳಸಲಾಗುತ್ತಿದ್ದ ಯಂತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಮಾಹಿತಿ ಪ್ರಕಾರ ಅಲ್ವಿನ್ ಡಿಸೋಜ ಅವರು ವರದಿಗಾರರೊಬ್ಬರ ಜೊತೆಗೆ ಸುದ್ಧಿ ನಡೆಸಲು ತೆರಳಿ ವಾಪಸ್ಸಾಗುವ ಸಂದರ್ಭ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಸದ್ಯ ಕಂಕನಾಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಆಲ್ವಿನ್ ಜೆರೋಮ್ ಡಿಸೋಜಾ ಕೈಗೆ ಗಾಯವಾಗಿದ್ದು, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಯು.ಟಿ.ಖಾದರ್ ಖಂಡನೆ:
ಕಾAಗ್ರೆಸ್ ಮುಖಂಡ ಹಾಗೂ ಕ್ಯಾಥೊಲಿಕ್ ಸಭಾ ಮುಖಂಡ ಆಲ್ವಿನ್ ಪಾನೀರ್ ಮೇಲೆ ಹಲ್ಲೆ ನಡೆದಿರುವುದನ್ನು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಬಂಧಿಸುವAತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.

Exit mobile version