Site icon Ullalavani

ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯಿಂದ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ , ಆರ್ಥಿಕ ಸಮಿತಿಯೊಂದಿಗೆ ಮಾತುಕತೆಯ ಭರವಸೆ : ಸಿರಿಲ್ ರಾಬರ್ಟ್ ಡಿಸೋಜ

ಮುಡಿಪು : ಸ್ಪೀಕರ್ ಯು.ಟಿ.ಖಾದರ್ ಅವರು ಸರಕಾರದ ಸಂಬಂಧಿಸಿದ ಅಧಿಕಾರಿಗಳನ್ನು ಶೀಘ್ರವೇ ಕರೆಯಿಸಿ ಸಭೆ ನಡೆಸುವ ವಿಶ್ವಾಸವನ್ನು ನೀಡುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯ ಹೋರಾಟದ ಬೆನ್ನಿಗೆ ನಿಲ್ಲುವ ವಿಶ್ವಾಸ ಸೂಚಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ವ್ಯಾಪ್ತಿಗಳಲ್ಲಿಯೂ ಎಲ್ಲರೂ ಹೋರಾಡಿ ಆದಷ್ಟು ಬೇಗ ಏಳನೇ ವೇತನ ತಾರತಮ್ಯವನ್ನು ಸರಿಪಡಿಸಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ದ.ಕ. ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಹೇಳಿದ್ದಾರೆ.
ಜು.1,2022ರಿಂದ ಜು.31, 2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಡಿ.ಸಿ.ಆರ್.ಜಿ, ಕಮ್ಯೂಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನೀಡಬೇಕು ಹಾಗೂ ಪರಿಷ್ಕೃತ ಆದೇಶ ನೀಡಬೇಕು ಎಂದು ಹೋರಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ಇಂದು ಮುಡಿಪು ಸಮೀಪ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಸಂಘಕ್ಕೆ ಗೌರವಯುತವಾದ ಪ್ರತಿಕ್ರಿಯೆ ಸಿಕ್ಕಿದೆ. ಸತತ ಬೆನ್ನಹಿಂದೆ ಇದ್ದಾರೆ ಅನ್ನುವ ಭರವಸೆ ಕೊಟ್ಟಿದ್ದಾರೆ. ಭಿಕ್ಷೆ ಬೇಡುವುದಲ್ಲ, ಸಾಲ ಕೇಳುವುದಲ್ಲ. ಕರ್ನಾಟಕ ಸರಕಾರ ಏಳನೇ ವೇತನ ಆಯೋಗದಲ್ಲಿ ತಡೆದಿಟ್ಟ ಸಂಬಳ ಕೇಳಲು ಕೇಳಿದ್ದೇವೆ. ಅಳನ್ನು ಹಂಚಲು ಏಕಪಕ್ಷೀಯವಾಗಿ ಸ್ಪಂಧಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದ್ದೇವೆ. ಅವರು ಗೌರವಯುತವಾಗಿ ಮನವಿಯನ್ನು ಸ್ವೀಕರಿಸಿ ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕಿ ಮಂಜುಳಾ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಂಬಂಧಿಸಿದ ಇಲಾಖೆಗಳಿಗೂ ಮನವಿ ಸಲ್ಲಿಸಲಾಗಿದೆ. ಇದೀಗ ವಿಧಾನಸಭಾ ಸ್ಪೀಕರ್ ಅವರ ಗಮನಕ್ಕೆ ತರಲಾಗಿದೆ. ಆರ್ಥಿಕ ಇಲಾಖೆಯ ಜೊತೆಗೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.
ನಿಯೋಗದಲ್ಲಿ ಸ್ಟ್ಯಾನಿ ತಾವ್ರೋ , ನಾರಾಯಣ್, ಮೋಹನ್ ಬಂಗೇರ, ಅಮರ್ ಉಪಸ್ಥಿತರಿದ್ದರು.

Exit mobile version