Site icon Ullalavani

ಅ.5 ಗ್ರ್ಯಾಂಡ್ ಮೌಲಿದ್ ಸಮಾರೋಪ

ಉಳ್ಳಾಲ: ತಾಜುಲ್‌ ಉಲಮಾ ಎಜ್ಯೂಕೇಷನ್ ಸೆಂಟರ್ ಮತ್ತು ಕೆಎಂಜೆ, ಎಸ್ ವೈಎಸ್ , ಎಸ್ ಎಸ್ ಎಪ್ ಜಂಟಿ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಸಮಾರೋಪ ಸಮಾರಂಭವು
ಅ.5 ಶನಿವಾರ ಅಜ್ಜಿನಡ್ಕದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಸದಸ್ಯ ನಾಸಿರ್ ಅಜ್ಜಿನಡ್ಕ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ್ನ 2 ಗಂಟೆಗೆ ತಾಜುಲ್ ಉಲಮಾ
ಎಜುಕೇಷನ್ ಸೆಂಟರ್ ವಿದ್ಯಾರ್ಥಿಗಳಿಂದ ವಿವಿಧ ಮಿಲಾದ್ ಕಾರ್ಯಕ್ರಮಗಳು ನಡೆಯಲಿದ್ದು ಈ
ಕಾರ್ಯಕ್ರಮವನ್ನು ಕೆ.ಪಿ ಹುಸೈನ್ ಸಅದಿ ಕೆಸಿರೋಡ್ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಇಬ್ರಾಹಿಂ ಸಿ.ಎಚ್‌ ವಹಿಸಲಿದ್ದಾರೆ ಎಂದರು.
ಸಂಜೆ 4 ಗಂಟೆಗೆ ಗ್ರ್ಯಾಂಡ್ ಮೌಲಿದ್ ಸಮಾರೋಪ ಸಮಾರಂಭವು ಇಬ್ರಾಹಿಂ ಪೈಝಿ ಉಚ್ಚಿಲವರ ನೇತೃತ್ವದಲ್ಲಿ ನಡೆಯಲಿದ್ದು, ಸಂಜೆ 7 ಗಂಟೆಗೆ ಮದನೀಯಂ
ಮಜ್ಜಿಸ್ ಕಾರ್ಯಕ್ರಮ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ರವರ ನೇತೃತ್ವದಲ್ಲಿ ನಡೆಯಲಿದೆ. ರಾತ್ರಿ 9.30 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು
ಸುದ್ದಿ ಗೋಷ್ಠಿ ಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಇಬ್ರಾಹಿಂ ಸಿ.ಎಚ್,
ಕರ್ನಾಟಕ ಮುಸ್ಲಿಂ ಜಮಾತ್ ಅಜ್ಜಿನಡ್ಕ ಅಧ್ಯಕ್ಷ ಹಂಝ ಕೋಟೆಕಾರ್, ಎಸ್ ವೈ ಎಸ್ ಅಧ್ಯಕ್ಷ ಕಮಾಲ್,
ಎಸ್ಎಸ್ ಎಫ್ ನಾಯಕ ಮುಸ್ತಫಾ ಕೆ.ಪಿ ಉಪಸ್ಥಿತರಿದ್ದರು.

Exit mobile version