Site icon Ullalavani

ಸರಕಾರಿ ಪದವಿಪೂರ್ವ ಕಾಲೇಜು ಕುರ್ನಾಡು, ಮುಡಿಪು ಎನ್‌ಎಸ್‌ಎಸ್ ವಿಶೇಷ ಶಿಬಿರ

ಮುಡಿಪು  : ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಶಿಬಿರಗಳು ಪೂರಕವಾಗಿದ್ದು ವಿದ್ಯಾರ್ಥಿಗಳು ಸೇವೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಬೇಕು ಎಂದು  ನಿವೃತ್ತ ದೈಹಿಕ ಶಿಕ್ಷಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ. ಶೀನ ಶೆಟ್ಟಿ ಹೇಳಿದರು.

ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಮಾಡೂರು ಕೋಟೆಕಾರು ಶಾಲೆಯಲ್ಲಿ ಸ.ಪ.ಪೂ ಕಾಲೇಜು ಕುರ್ನಾಡು ಇಲ್ಲಿನ ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲರಾದ
ಸರಳಾದೇವಿ ಪಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುಷ್ಪ.ಯು, ಮುಖ್ಯ ಶಿಕ್ಷಕರು ದ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಮಾಡೂರು ಜುಬೈರ್ ಹಾಗೂ ಅಜೀಜ್ ಮಾಡೂರು ಇವರುಗಳು ಶುಭ ಹಾರೈಸಿದರು. ಉಪನ್ಯಾಸಕರಾದ ಅಂಬಾಪ್ರಸಾದ್, ಸುದರ್ಶನ್ ಆರ್ ಇವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ  ರೇಖಾ ಬಿ ಇವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾದರು. ಆಂಗ್ಲ ಭಾಷಾ ಉಪನ್ಯಾಸಕರಾದ ಅಂಬಾಪ್ರಸಾದ್‌ರವರು ಕಾಠ್ಯಕ್ರಮ ನಿರೂಪಿಸಿ, ಕು.ತ್ರಿಷಾ ವಂದಿಸಿದರು.

Exit mobile version