Site icon Ullalavani

ನರಿಂಗಾನ ಗಾಂಧಿ ಜಯಂತಿ ಆಚರಣೆಯಲ್ಲಿ ಸ್ವಚ್ವ ಮನೆ ಸ್ವಯಂ ಘೋಷಣಾ ಪತ್ರ ಸಲ್ಲಿಕೆಗೆ ಸಂಕಲ್ಪ

ನರಿಂಗಾನ: ನರಿಂಗಾನ ಗ್ರಾ.ಪಂ.ನಲ್ಲ ಸಂವಿದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಸುಸ್ಥಿರ ಸ್ವಚ್ಛತೆ ಸಾಧಿಸಲು ಸ್ವಚ್ಛ ಮನೆ ಸ್ವಯಂ ಘೋಷಣಾ ಪತ್ರ ಸಲ್ಲಿಸುವ ಸಾಮೂಹಿಕ ಸಂಕಲ್ಪ ಮಾಡುವ ಮೂಲಕ 155 ನೇ ಗಾಂಧಿ ಜಯಂತಿ ಮತ್ತು ಲಾಲ್ ಬಹದೂರ್ ಶಾಸ್ತ್ರಿಯವರ ಜನ್ಮ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಗ್ರಾಮ ಪಂಚಾಯತ್,ಜನಶಿಕ್ಷಣ ಟ್ರಸ್ಟ್, ಅಪ್ನಾದೇಶ್ ಬಳಗದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಭಾವ ಚಿತ್ರಗಳಿಗೆ ಪುಷ್ಪಾಂಜಲಿ ಅರ್ಪಿಸಿ ಗೌರವ ಸಲ್ಲಿಸಲಾಯಿತು.


ನರೇಗ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಸಂವಿದಾನ ಪುಸ್ತಕ ವಿತರಿಸಿ ಸಂವಿದಾನ ಅಭಿಯಾನಕ್ಕೆ ಚಾಲನೆ ನೀಡಿ ಶೂನ್ಯ ಕಸ ನಿರ್ವಹಣೆ, ಸ್ವಚ್ಛ ಮನೆ ಸ್ವಯಂ ಘೋಷಣೆ ಪತ್ರ ಸಲ್ಲಿಕೆ ಕುರಿತು ಮಾಹಿತಿ ನೀಡಿ ಸ್ವಚ್ಛತಾ ಪ್ರತಿಜ್ನಾ ವಿಧಿ ಭೋಧಿಸಿದರು.ಡಿಸೆಂಬರ್ 31ರ ಒಳಗೆ ಜನ ಪ್ರತಿನಿಧಿಗಳು ಅಧಿಕಾರಿಗಳು ಸಂಘ ಸಂಸ್ಥೆಗಳು ಸೇರಿದಂತೆ 1700 ಕಟುಂಬಗಳಿಂದ ಸ್ವಚ್ಛ ಮನೆ ಸ್ವಾಭಿಮಾನಿ ಕುಟಂಬ ಸ್ವಯಂ ಘೋಷಣಾ ಪತ್ರಗಳನ್ನು ಗ್ರಾ.ಪಂ.ಗೆ ಸಲ್ಲಿಸಲು ಸಂಕಲ್ಪ ಮಾಡಲಾಯಿತು. ಶೂನ್ಯ ಕಸ ನಿರ್ವಹಣೆ ಕಸ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಮುದಾಯದ ಸಹಭಾಗಿತ್ವದಲ್ಲಿ ಸಮರೋಪಾದಿಯಲ್ಲಿ ಶ್ರಮಿಸಲಾಗುವುದೆಂದು ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ನವಾಜ್ ತಿಳಿಸಿದರು.

ಉಪಾಧ್ಯಕ್ಷೆ ಜ್ಯೋತಿ ಡಿಸೋಜ,ಉಳ್ಳಾಲ ತಾ.ಪಂ.ಅಧಿಕಾರಿ ನಳಿನಿ ಎ.ಕೆ, ಪಿಡಿಒರಜನಿ, ಕೆ.ಪಿ.ಎಸ್ ಉಪ ಪ್ರಾಂಶುಪಾಲ ಸಂತೋಷ್, ಪಂ. ಸದಸ್ಯರಾದ ಮುರಳೀಧರ ಶೆಟ್ಟಿ, ಅಬ್ದುಲ್ ರಹಿಮಾನ್, ಶೇಖಬ್ಬ,ಶಾಂತಿ ಡಿಸೋಜ,ಜಯಂತಿ, ಮಲ್ಲಿಕಾ ಗಟ್ಟಿ, ಲತೀಫ್, ಸ್ಥಳೀಯ ಮುಖಂಡರಾದ ಮಹಮ್ಮದ್ ಜಿಲಾನಿ, ಮೋಹಿನ್ ಬ್ಯಾರಿ,ಸಮುದಾಯ ಆರೋಗ್ಯ ಅಧಿಕಾರಿ,ಪಂಚಾಯತ್ ಸಿಬ್ಬಂಧಿಗಳು,ಅಂಗನವಾಡಿ ಆಶಾ ಕಾರ್ಯಕರ್ತೆರು ಬಾಗವಹಿಸಿದ್ದರು. ನರಿಂಗಾನ ಗ್ರಾ.ಪಂ. ವಠಾರದಿಂದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ವರೇಗೆ1.5 ಕಿ.ಮೀ.ದೂರ ಸ್ವಚ್ಛತಾ ಜಾಗೃತಿ ಜಾಥ ನಡೆಯಿತು.

Exit mobile version