
ತೊಕ್ಕೊಟ್ಟು: ಬಿಜೆಪಿ ಕೇವಲ ರಾಜಕೀಯ ಪಕ್ಷವಾಗದೆ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಕೂಡ ತನ್ನ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಅದೇ ರೀತಿ ಪ್ರಧಾನಿಯವರ ಹುಟ್ಟುಹಬ್ಬದ ಅಂಗವಾಗಿ ದೇಶದಾದ್ಯಂತ ನಡೆಯುತ್ತಿರುವ ಸೇವಾ ಪಾಕ್ಷಿಕದಡಿಯಲ್ಲಿ ಮಂಗಳೂರು ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವಿಶೇಷಚೇತನರಿಗೆ ಸಹಾಯಹಸ್ತ ಚಾಚುವ ಮೂಲಕ ವಿಭಿನ್ನವಾಗಿ ಸೇವೆಯನ್ನು ನಡೆಸಿದೆ ಎಂದು ಮಂಗಳೂರು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಧವಿ ಉಳ್ಳಾಲ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಬಿಜೆಪಿ ಮಂಗಳೂರು ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಸೇವಾ ಪಾಕ್ಷಿಕಾ ಅಡಿಯಲ್ಲಿ ವಿಶೇಷ ಚೇತನರಿಗೆ ಸಹಾಯಧನ ಹಾಗೂ ವ್ಹೀಲ್ ಚೇರ್ ವಿತರಿಸಿ ಬಳಿಕ ಮಾತನಾಡಿದರು.
ಕೊಣಾಜೆಯ ತಾಕಟ್ಟೆ ನಿವಾಸಿ ರಂಜಿತ ರಾಜೇಶ್ ಇವರ ಮಗಳು ಕೃತಿ , ಅಸೈಗೊಳಿ ಸೈಟಿನ ಹರಿಣಿ ಎಂಬವರ ಪುತ್ರ ಯಶವಂತ್, ಪಿಲಾರ್ ಪರಿಸರದ ವಿಶೇಷ ಚೇತನ ಮಹಿಳೆಗೆ ವ್ಹೀಲ್‌ಚೇರ್ ನ್ನು ವಿತರಣೆ ನಡೆಸಲಾಯಿತು.
ಮಹಿಳಾ ಮೋರ್ಚಾದ ಮಂಡಲದ ಪ್ರಭಾರಿ ಕಾರ್ಯದರ್ಶಿ ಸುಮನ ಹರೀಶ್ ಶೆಟ್ಟಿ, ಬೂತ್ ಅಧ್ಯಕ್ಷ ಮನೋಜ್, ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮ ಶೆಟ್ಟಿ, ಓಬಿಸಿ ಮೋರ್ಚಾದ ಕಾರ್ಯದರ್ಶಿ ಶಶಿಕಲ ಕೋಣಾಜೆ, ಯುವ ಮೋರ್ಚಾದ ಅಧ್ಯಕ್ಷರಾದ ಮುರಳಿಧರ್, ರೈತ ಮೋರ್ಚಾದ ಅಧ್ಯಕ್ಷರಾದ ಪದ್ಮನಾಭ ಗಟ್ಟಿ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಮಲತಾ ಕೊಣಾಜೆ, ಉಪಾಧ್ಯಕ್ಷರುಗಳಾದ ಸ್ವಪ್ನ ಶೆಟ್ಟಿ, ಸೌಮ್ಯ ತಲಪಾಡಿ, ಮಹಿಳಾ ಮೋರ್ಚಾದ ಕಾರ್ಯದರ್ಶಿಗಳಾದ ಸುಧಾ ಸುರೇಶ್ ,ವಿನುತಾ ಕೈರಂಗಳ, ವನಿತಾ ಬಗಂಬಿಲ, ಸುಮಿತ್ರ ತೊಕ್ಕೋಟು ಸದಸ್ಯರುಗಳಾದ ಶಶಿಕಲ ಗಟ್ಟಿ ಕುತ್ತಾರು, ಹೇಮರಾವ್ ತಲಪಾಡಿ ಉಪಸ್ಥಿತರಿದ್ದರು.
ಕೊಣಾಜೆ ಪಂಚಾಯತ್ ನ ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು, ಆಶಾ ಕಾರ್ಯಕರ್ತೆಯರು ಮತ್ತು ಇತರ ಪ್ರಮುಖ ನಾಯಕರುಗಳು ಭಾಗವಹಿಸಿದ್ದರು.