Site icon Ullalavani

ಕುರ್ನಾಡು ದತ್ತಾತ್ರೇಯ ಯಕ್ಷಗಾನ, ಭಜನಾ ಮಂಡಳಿ: ಅಗಲಿದ ಕಲಾವಿದರ ಸಂಸ್ಮರಣೆ

ಮುಡಿಪು: ಉಳ್ಳಾಲ ತಾಲೂಕು ಕುರ್ನಾಡು ಶ್ರೀ ದತ್ತಾತ್ರೇಯ ಭಜನಾ ಮತ್ತು ಯಕ್ಷಗಾನ ಮಂಡಳಿ ಹಾಗೂ ಮಾತೃ ಮಂಡಳಿ ವತಿಯಿಂದ ಸೆ.29ರ ಭಾನುವಾರ ಅಪರಾಹ್ನ ಕುರ್ನಾಡಿನಲ್ಲಿ, ಸಂಘದ ಅಗಲಿದ ಕಲಾವಿದರಿಗೆ ನುಡಿ ನಮನ ಹಾಗೂ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷ ನಾಗರಾಜ್ ಭಟ್ ಹಾಗೂ ಉಪಾಧ್ಯಕ್ಷ ಮೋಹನ್ ಅಂಗಣೆಮಾರ್ ಸಂಸ್ಮರಣೆ ನೆರವೇರಿಸಿದರು.
ಸಂಘದ ಸದಸ್ಯರಾಗಿದ್ದ ದಿ.ಶಿವಣ್ಣ ಆಚಾರ್ಯ ಕುರ್ನಾಡು ಬೆಟ್ಟು, ದಿ.ಸೀತಾರಾಮ ಆಚಾರ್ಯ ಕುರ್ನಾಡುಬೆಟ್ಟು, ದಿ.ಕರಿಯಪ್ಪ ಮಾಸ್ತರ್‌ ದೆದ್ದು, ಬೋಳ್ಯಾರ್, ದಿ.ಸೀತಾರಾಮ ಶೆಟ್ಟಿ ಕುರ್ನಾಡು ಹಾಗೂ ದಿ.ಜಯಂತ ಟೈಲರ್ ಕಟ್ಟೆಮಾರ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಹಿರಿಯ ಸದಸ್ಯರಾದ ಬಾಲಕೃಷ್ಣ ಹನ್ನೆರಡುಮುಡಿ, ಭಾಸ್ಕರ ಆಚಾರ್ಯ ಮಿತ್ತಕೋಡಿ, ಚಂದ್ರಹಾಸ ಬೀಜಮಾರು, ನವೀನ್ ಚಂದ್ರ ಗಟ್ಟಿ, ವಿಠಲ ಆಚಾರ್ಯ ಮಿತ್ತಕೋಡಿ, ಸುಂದರ ದೇವಾಡಿಗ, ಮಂಜುನಾಥ ಕುಲಾಲ್, ಮೋನಪ್ಪ ಕುಲಾಲ್ ಹಾಗೂ ಸಂಘದ ಇತರ ಸದಸ್ಯರು ಹಾಜರಿದ್ದರು. ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್ ವಂದಿಸಿದರು.
ಸಮಾರಂಭದ ಸಂಯೋಜಕ, ಮದ್ದಳೆಗಾರ ಭಾಸ್ಕರ ಕೋಳ್ಯೂರು ಅವರನ್ನು ಗೌರವಿಸಲಾಯಿತು.
ತಾಳಮದ್ದಳೆ:
ಸಮಾರಂಭದ ಪ್ರಯುಕ್ತ ‘ಸುಧನ್ವ ಮೋಕ್ಷ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ದಿವಾಕರ ಆಚಾರ್ಯ ಪೊಳಲಿ, ಚೆಂಡೆ-ಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು ಹಾಗೂ ಸುಧಾಸ್ ಕಾವೂರು, ಮುಮ್ಮೇಳದಲ್ಲಿ ದೇವರಾಜ ಹೆಗಡೆ ಪುತ್ತೂರು, ದಿನಕರ ಎಸ್. ಪಚ್ಚನಾಡಿ, ಪದ್ಮನಾಭ ಉಪಾಧ್ಯಾಯ ಹಾಗೂ ಸುನಿಲ್ ಕುಮಾರ್ ಬಿ.ಸಿ.ರೋಡ್‌ ಪಾಲ್ಗೊಂಡರು.

Exit mobile version