Site icon Ullalavani

ಮಂಜನಾಡಿ: ಮರಳು ಲಾರಿಗಳನ್ನು ತಡೆಹಿಡಿದು ಪ್ರತಿಭಟನೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮಂಜನಾಡಿ : ಕೇರಳಕ್ಕೆ ಮರಳು ಸಾಗಾಟ ನಡೆಸುತ್ತಿರುವುದನ್ನು ವಿರೋಧಿಸಿದ ಮಂಜನಾಡಿ ಗ್ರಾಮದ ನಾಗರಿಕರು ಹಾಗೂ ಕೂಲಿಕಾರ್ಮಿಕರು ಸೇರಿಕೊಂಡು ಮರಳು ಲಾರಿಗಳನ್ನು ತಡೆಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ಕಲ್ಕಟ್ಟ ದಲ್ಲಿ ನಡೆದಿದೆ.

ಕೇರಳ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವುದರಿಂದ ಸ್ಥಳೀಯ ಜನರಿಗೆ ಮರಳಿನ ಅಭಾವ ಉಂಟಾಗಿದೆ. ಇದರಿಂದ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲೇ ಉಳಿಯುವಂತಾಗಿದೆ.ಮನೆ, ಕಟ್ಟಡ ನಿರ್ಮಿಸಲು ಮರಳು ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ ಹಲವು ಲಾರಿಗಳು ಕೊಣಾಜೆಯಿಂದ ಮಂಜನಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಮರಳು ಸಾಗಾಟ ನಡೆಸುತ್ತಲೇ ಇದೆ. ಕ್ರಮಕೈಗೊಳ್ಳಬೇಕಾದ ಇಲಾಖೆಗಳು ಕಣ್ಣಿದ್ದೂ ಕುರುಡಾಗಿದೆ. ಅವರ ಮುಂದೆಯೇ ಲೋಡುಗಟ್ಟಲೆ ಮರಳು ಸಾಗಾಟ ನಡೆಯುತ್ತಿದ್ದರೂ ಸುಮ್ಮನಿರುತ್ತಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಮರಳು ವ್ಯವಹಾರ ನಡೆಯಲಿ ಆದರೆ ಸ್ಥಳೀಯರಿಗೆ ತೊಂದರೆಯಾಗದ ರೀತಿಯಲ್ಲಿ ಮುಂದುವರಿಯಬೇಕು .

ಅಪಘಾತವಾದರೂ ಕ್ಯಾರೇ ಅನ್ನುತ್ತಿಲ್ಲ:

ನಾಟೆಕಲ್ ನಿಂದ ಮಂಜನಾಡಿ ಮಾರ್ಗವಾಗಿ ಕೇರಳದತ್ತ ದಿನಾ ಸಾಗುವ ಮರಳು ಲಾರಿಗಳು ಮಿತಿ ಮೀರಿದ ವೇಗದಿಂದ ತೆರಳುತ್ತಿದೆ. ಇದರಿಂದ ಹಲವು ಅಪಘಾತಗಳು ಸಂಭವಿಸಿದರೂ ಕೇಳುವವರಿಲ್ಲ. ಲಾರಿ ಚಾಲಕರೂ ಅಮಿತ ವೇಗವನ್ನು ಪ್ರಶ್ನಿಸಿದರೆ ದರ್ಪ ತೋರಿಸುತ್ತಾರೆ. ಈ ಭಾಗದ ಜನ ಅಸಹಾಯಕರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೇರಳ ಕಡೆಗೆ ಸಾಗಾಟ ನಡೆಸುತ್ತಿದ್ದ ಮೂರು ಲಾರಿಗಳನ್ನು ಸಾರ್ವಜನಿಕರು ತಡೆಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದರು.

ಸ್ಥಳದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಇಸ್ಮಾಯಿಲ್ ದೊಡ್ಡಮನೆ, ತಾ.ಪಂ ಸದಸ್ಯ ನಕ್ಕರೆ ಬಾವಾ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೊಣಾಜೆ ಎಸ್.ಐ ಸುಧಾಕರ್ ಪ್ರತಿಭಟನಾಕಾರರು ಸಮಾಧಾನ ಪಡಸಿ ಲಾರಿಗಳನ್ನು ವಶಕ್ಕೆ ತೆಗೆದುಕೊಂಡರು.

ಮಾಲೀಕರಿಗೇ ಒಪ್ಪಿಸಿದರು !
ಅವ್ಯಾಹತವಾಗಿ ಕೇರಳ ಕಡೆಗೆ ಮರಳು ಸಾಗಾಟ ನಡೆಸುವುದನ್ನು ತಡೆದ ಕಲ್ಕಟ್ಟ ನಿವಾಸಿಗಳು ಮೊದಲಿಗೆ ಒಂದು ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದರು. ಆಧರೆ ಪೊಲೀಸರು ಅದನ್ನು ವಾಪಸ್ಸು ಲಾರಿಯ ಮಾಲೀಕರ ಮನೆಗೆ ಕಳುಹಿಸಿದ್ದು, ಅವರು ಮನೆಯ ಕಂಪೌಂಡಿನ ಒಳಗೆ ಇರಿಸಿದ್ದಾರೆ . ಪೊಲೀಸರ ಕ್ರಮವನ್ನು ಪ್ರತಿಭಟನಾಕಾರರು ತೀವ್ರವಾಗಿ ಆಕ್ಷೇಪಿಸಿದ್ದಾರೆ.

Exit mobile version