ತೊಕ್ಕೊಟ್ಟು: ಇಲ್ಲಿನ ಕಾಪಿಕಾಡು ಉಮಾಪುರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅ. 3 ಗುರುವಾರದಿಂದ ಅ. 11ರ ವರೆಗೆ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ಜರಗಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್‌ಹೇಳಿದ್ದಾರೆ.
ಬ್ರಹ್ಮಶ್ರೀ ಕುಂಟಾರು ರವೀಶ್‌ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಜರಗಲಿದೆ.
ಅ. 3 ಬೆಳಿಗ್ಗೆ 9 ಗಂಟೆಗೆ ಹೆಚ್‌ಎಫ್‌ಡಿಸಿ ಬ್ಯಾಂಕ್‌ಪ್ರಬಂಧಕರು ಕಾಪಿಕಾಡಿನ ಅಶ್ವಿನ್‌ರಾವ್‌ಮತ್ತು ಸೋಮೇಶ್ವರ ಪರಿಜ್ಞಾನ ವಿದ್ಯಾಲಯದ ಶಿಕ್ಷಕಿ ರಾಧಿಕಾ ಅಶ್ವಿನ್‌ರಾವ್‌ದಂಪತಿ ಉತ್ಸವದ ನಂದಾದೀಪ ಪ್ರಜ್ವಲಿಸಲಿದ್ದಾರೆ.
ಬಳಿಕ ಗಣಪತಿ ಹವನ, ನಾಗತಂಬಿಲ, ಪರಿವಾರ ದೈವಗಳಿಗೆ ತಂಬಿಲ ಧಾನ್ಯಲಕ್ಷ್ಮೀ ಪೂಜೆ, ಭಕ್ತಾಧಿಗಳಿಗೆ ತೆನೆ ವಿತರಣೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅ. 7, ಬೆಳಿಗ್ಗೆ 10 ರಿಂದ ಶ್ರೀ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷ ಪೂಜೆ, ಅ. 9 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಬ್ರಹ್ಮಶ್ರೀ ಕುಂಟಾರು ರವೀಶ್‌ತಂತ್ರಿಗಳ ನೇತೃಥ್ವದಲ್ಲಿ ಚಂಡಿಕಾ ಹವನ ಜರಗಲಿದೆ. ಮಧ್ಯಾಹ್ನ ಪೂರ್ಣಿಮಾ ಮತ್ತು ಎ.ಜೆ.ಶೇಖರ್‌ಹಾಗೂ ಮನೆಯವರ ಸೇವಾ ರೂಪದಲ್ಲಿ ಅನ್ನಸಂತರ್ಪಣೆ ಜರಗಲಿದೆ.
ಅ. 12 ರಂದು ಆಯುಧ ಪೂಜೆ ಹಿನ್ನೆಲೆಯಲ್ಲಿ ಬೆಳಿಗ್ಗೆ 7.30 ರಿಂದ ವಾಹನ ಪೂಜೆ ಸೇವೆ, 9 ರಿಂದ ವಿದ್ಯಾರಂಭ ಜರಗಲಿದೆ. ನಿತ್ಯ ಸಂಜೆ ಭಜನಾ ಕಾರ್ಯಕ್ರಮ, ರಂಗಪೂಜೆ ಜರಗಲಿದೆ ಎಂದರು.
ದೇವಸ್ಥಾನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಅತ್ತಾವರ, ಅಧ್ಯಕ್ಷರು ದಿನೇಶ್ ರೈ ಕಳ್ಳಿಗೆ, ಕೋಶಾಧಿಕಾರಿ ಟಿ.ರಘುರಾಮ ಶೆಟ್ಟಿ ಎಲ್ಲರೂ ಪುಣ್ಯ ಕಾರ್ಯದಲ್ಲಿ ಸಹಕುಟುಂಬಿಕರಾಗಿ ಭಾಗವಹಿಸಿ ಶ್ರೀ ಉಮಾಮಹೇಶ್ವರಿ ದೇವಿ ಮತ್ತು ಪರಿವಾರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.