Site icon Ullalavani

ನಾಟೆಕಲ್: ಕೆಲಸ ಸ್ಥಗಿತಗೊಳಿಸಿ ಗ್ರಾಮಲೆಕ್ಕಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ

ನಾಟೆಕಲ್ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ರಾಜ್ಯಾದ್ಯಂತ ಕರೆ ನೀಡಿರುವ ಮುಷ್ಕರದ ಅಂಗವಾಗಿ ಉಳ್ಳಾಲ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳು ನಾಟೆಕಲ್ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಎಲ್ಲಾ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಷನ್ ಗಳನ್ನು , ಲೇಖನಿ ಸ್ಥಗಿತಗೊಳಿಸಿ ರಾಜ್ಯವ್ಯಾಪಿ ಇಂದಿನಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾದರು.
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವ ಬಗ್ಗೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ವಿಷಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು.
ತಾಲೂಕು ತಹಶೀಲ್ದಾರ್ ಎ.ಪುಟ್ಟರಾಜು ಇವರಿಗೆ ಬೇಡಿಕೆಗಳ ಮನವಿಯನ್ನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಗ್ರಾಮಲೆಕ್ಕಾಧಿಕಾರಿಗಳು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಗ್ರಾಮಲೆಕ್ಕಾಧಿಕಾರಿಗಳು ಸಲ್ಲಿಸಿದರು.
ಈ ಸಂದರ್ಭ ಉಳ್ಳಾಲ ತಾಲೂಕು ಗ್ರಾಮ ಆಡಳಿತ ಸಂಘದ ಅಧ್ಯಕ್ಷ ತೌಫೀಕ್, ಉಪಾಧ್ಯಕ್ಷೆ ಅಕ್ಷತಾ, ಪ್ರ.ಕಾ ನವ್ಯ ಎಸ್.ಎನ್.ರಾವ್, ಕಾವ್ಯ, ಲಾವಣ್ಯ ಕೆ. , ಜಗದೀಶ್ ಶೆಟ್ಟಿ, ನಯನ ,ರೇಷ್ಮಾ, ನಿಂಗಪ್ಪ ಜಜ್ಜೂರಿ, sಸಂಘದ ಸದಸ್ಯರುಗಳಾದ ಚೈತ್ರ, ಅಮ್ಜದ್ ಖಾನ್ , ಸುರೇಶ್, ಅಕ್ಷಿತಾ, ರಶೀದಾ, ಜಯರ್ಶರೀ, ರಾಘವೇಂದ್ರ, ಪ್ರದೀಪ್ , ಲಾವಣ್ಯ ಉಪಸ್ಥಿತರಿದ್ದರು.

Exit mobile version