Site icon Ullalavani

ಜನಚೈತನ್ಯ ಸೌಹಾರ್ದ ಸಹಕಾರಿ‌ ಸಂಘದ ಮಹಾಸಭೆ

ತೊಕ್ಕೊಟ್ಟು: ಜನಚೈತನ್ಯ ಸೌಹಾರ್ದ ಸಹಕಾರಿ‌ ಸಂಘ ಭಟ್ನಗರ ತೊಕ್ಕೊಟ್ಟು ಇದರ 2023-24 ನೇ ಸಾಲಿನ ತೃತೀಯ ವಾರ್ಷಿಕ ಸಾಮಾನ್ಯ ಸಭೆಯು ಶನಿವಾರದಂದು ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಯು. ರವೀಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಹಕಾರಿಯು 2023-24 ನೇ ಸಾಲಿನ ಅಂತ್ಯದಲ್ಲಿ ಸದಸ್ಯರಿಂದ 14,54,000 ಶೇರು ಬಂಡವಾಳವನ್ನು 2 ಕೋಟಿ 74 ಲಕ್ಷ ಠೇವಣಿಗಳು ಸಂಗ್ರಹ ಮಾಡಿದೆ ಮತ್ತು ಸುಮಾರು 200 ಸದಸ್ಯರಿಗೆ 9800,000 ದ ವರೆಗೆ ವಿವಿದ ಸಾಲಗಳನ್ನು ಮಂಜೂರು ಮಾಡಲಾಗಿದೆ. ಹೆಚ್ಚಿನವರು ಸಮಯಕ್ಕೆ ಸರಿಯಾಗಿ ಸಾಲ ಸಂದಾಯ ಮಾಡಿರುತ್ತಾರೆ.ನಾವು ಮುಂದಿನ ವರ್ಷ ಶೇರು ಬಂಡವಾಳ 30,00,000/- ಹಾಗೂ ನೀರಖು ಠೇವಣಿಗಳನ್ನು 3 ಕೋಟಿ ಹೆಚ್ಚು ಸಂಗ್ರಹಿಸಲು ಯೋಜನೆಗಳನ್ನು ಮಾಡಿದ್ದೇವೆ. ನಮ್ಮ ಸಹಕಾರಿಯನ್ನು ಉತ್ತಮ ಸ್ಥಿತಿಗೆ ತರಲು ಸದಸ್ಯರು ಹೆಚ್ಚು ಹೆಚ್ಚು ಶೇರುಗಳನ್ನು ಮತ್ತು ಠೇವಣಿಗಳನ್ನು ಕೊಟ್ಟು ಸಹಕರಿಸಬೇಕು ಮತ್ತು ಪಡೆದು ಕೊಂಡ ಸಾಲವನ್ನು ಸಲಯಾದ ಸಮಯಕ್ಕೆ ಮರುಪಾವತಿ ಮಾಡಬೇಕೆಂದು ಎಂದರು.

ಸಹಕಾರಿಯ ಉಪಾಧ್ಯಕ್ಷ ರಾಜೀವ್ ಬಂಗೇರ ಇವರು ಮಾತನಾಡಿ ಕಳೆದ ವರ್ಷಕ್ಕಿಂತ ಸಾಲ ಮರುಪಾವತಿ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತ ಬಂದಿದೆ ಅದುದರಿಂದ ಎಲ್ಲರೂ ತಮ್ಮ ಸಾಲವನ್ನು ಸರಿಯಾದ ಸಮಯಕೆ ಮರುಪಾವತಿ ಮಾಡ ಬೇಕು ಹಾಗೂ ನಾವು ಮುಂದಿನ ವರ್ಷಕ್ಕೆ ಶೇರು ಬಂಡವಾಳವನ್ನು ಮತ್ತು ಠೇವಣಿಗಳನ್ನು ಹೆಚ್ಚಿಸಲು ಯೋಜನೆಗಳನ್ನು ಹಾಕಿದ್ದೇವೆ ಅದುದರಿಂದ ಎಲ್ಲ ಸದಸ್ಯರಿಂದ ಹೆಚ್ಚಿನ ಪ್ರೋತ್ಸಾಹವನ್ನು ಬಯಸುತ್ತೇವೆ ಎಂದರು.

ಕಾರ್ಯದರ್ಶಿ ಮಾಲತಿ ಜೆ. ,ಶ್ರೀ ಭಗವತೀ ಕ್ಷೇತ್ರ ಕುದ್ರೋಳಿ ಅಚಾರಪಟ್ಟರಾದ ರಾಮಚಂದ್ರ, ಅಜೀತ್,ಕುಮಾರ್, ವಸಂತ್ ನಿರ್ದೆಶಕರಾದ ಗಣೇಶ್ ಕೊಲ್ಯ, ಮನೋಹರ್ ಬೋಳಾರ್, ರಾಜಗೋಪಾಲ್ ಬಂಗೇರ, ಸುರೇಶ್ ಐತ್ತಪ್ಪ, ಹರೀಶ್ ಬಂಗೇರ, ಅಪ್ಪಯ್ಯ ನಾಯ್ಕ್, ರಾಜೇಶ್ ಉಳ್ಳಾಲ್, ಕವಿತಾ ಬಿ. ದಾಸ್ ಉಪಸ್ಥಿತರಿದ್ದರು.

ನಿರ್ದೇಶಕರಾದ ದಿನೇಶ್ ಮರೋಳಿಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಚಿತ್ರಕಲಾ ಕೆ ವಂದಿಸಿದರು.

Exit mobile version