ದೇರಳಕಟ್ಟೆ: ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಟ್ರ್ಸ್ ಸೆಯನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್‌ನ ಆಶಯದಲ್ಲಿ “ನವ್ಯಾರಂಭ” ಪಿಜಿ ಇಂಡಕ್ಷನ್ ಕಾರ್ಯಕ್ರಮವು ವೈ.ಎಂ.ಕೆ ಆಡಿಟೋರಿಯಮ್‌ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಮ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಯ ಮಾಜಿ ಉಪಕುಲಪತಿ ಡಾ. ಬಿ. ಸಾಯಿ ಗಿರಿಧರ್ ಅವರು ಸ್ವಯಂ ಪ್ರಯತ್ನ ಮತ್ತು ಕೌಶಲ್ಯ ವೃದ್ಧಿಯ ಮಹತ್ವವನ್ನು ವಿವರಿಸಿದರು ಮತ್ತು ವಿದ್ಯಾರ್ಥಿಗಳಿಗೆ ಉನ್ನತ ನೈತಿಕ ಪ್ರಮಾಣಗಳನ್ನು ಎತ್ತಿಹಿಡಿಯುವ ಸಲಹೆ ನೀಡಿದರು.
ಯೆನೆಪೋಯ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಹೆಚ್ ಅವರು ಪರಿಶ್ರಮ ಮತ್ತು ಸಮಯಪಾಲನೆಯ ಕುರಿತಂತೆ ಮಾತನಾಡಿದರು.
ಯೆನೆಪೊಯ ಇನ್ಸ್ಟಿಟ್ಯೂಟ್‌ನ ಪ್ರಾಂಶುಪಾಲ ಡಾ. ಅರುಣ್ ಎ. ಭಾಗವತ್ ಅವರು “ಡಿಜಿಟಲ್ ಇಮ್ಮಾರ್ಟಾಲಿಟಿ” ಮತ್ತು “ಯು ಟು ಇಂಟರ್ಫೇಸ್” ಕುರಿತಾದ ಮಹತ್ವವನ್ನು ತಿಳಿಸಿದರು.
ಡಾ. ಶರೀನಾ ಪಿ., ಡಾ. ಜೀವನ್ ರಾಜ್, ಮತ್ತು ನಾರಾಯಣ್ ಸುಕುಮಾರ್ , ಪ್ರಾಧ್ಯಾಪಕಿ ಡಾ. ನಮ್ರತಾ ಎಸ್. ಉಪಸ್ಥಿತರಿದ್ದರು.
ಹಾಸ್ಪಿಟಾಲಿಟಿ ಸೈನ್ಸ್‌ನ ಮುಖ್ಯಸ್ಥ ಮೆರ್ವಿನ್ ಜೈಸನ್ ವಾಜ್ ಅಥಿತಿಗಳನ್ನು ಪರಿಚಯಿಸಿದರು ವಾಸುದೇವ ಶೆಣೈ ವಂದಿಸಿದರು.
ಎಂ.ಬಿಎ, ಎಂ.ಎಸ್ಸಿ. (ಮೈಕ್ರೊಬಯಾಲಜಿ), ಮತ್ತು ಎಂ.ಎಸ್ಸಿ. (ಆಹಾರ ವಿಜ್ಞಾನ ಮತ್ತು ಪೋಷಣೆ) ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
