
ತೊಕ್ಕೊಟ್ಟು: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಶತಾಯಗತವಾಗಿ ಬಿ.ಜೆ.ಪಿ. ಶಾಸಕರು ಆಯ್ಕೆಯಾಗಬೇಕಿದೆ. ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಉತ್ಸಾಹಿ ಮತ್ತು ಚುರುಕಿನ ಕಾರ್ಯಕರ್ತರು ಇರುವ ಈ ಕ್ಷೇತ್ರದಲ್ಲಿ ಇದನ್ನು ಸಾಧಿಸಿ ತೋರಿಸಲು ಅಸಾಧ್ಯವಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಅವರು ಬಿ.ಜೆ.ಪಿ. ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟುವಿನಲ್ಲಿ ಜರಗಿದ ಬಿಜೆಪಿ ಪ್ರಾಥಮಿಕ ಸದಸ್ಯತನ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಸದಸ್ಯತನ ಅಭಿಯಾನ ಪಕ್ಷದ ಕಾರ್ಯಕರ್ತರ ಆದ್ಯತಾ ಕಾರ್ಯವಾಗಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಿಯಿಲ್ಲದೆ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು, ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡುತ್ತಾ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತನ ಅಭಿಯಾನ ಪ್ರಕ್ರಿಯೆ ಈಗಾಗಲೇ ಆರಂಭಗೊAಡಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೯೦೦೦ ಕ್ಕೂ ಮಿಕ್ಕಿ ಸದಸ್ಯತನ ನೋಂದಾಯಿಸಿದ್ದು ಜಿಲ್ಲೆಯಲ್ಲಿ ಸುಮಾರು ೭೫,೦೦೦ ಸಾವಿರಕ್ಕೂ ಅಧಿಕ ಜನರು ಸದಸ್ಯತನ ಪಡೆದಿದ್ದಾರೆ. ಮುಂದಿನ ಐದು ದಿನಗಳಲ್ಲಿ ಈ ಪ್ರಕ್ರಿಯೆ ವೇಗಗೊಳ್ಳ ಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತರು ನೂರಕ್ಕೆ ಕಡಿಮೆ ಯಿಲ್ಲದೆ ಸದಸ್ಯತನ ನೋಂದಾವಣೆ ಮಾಡಬೇಕಿದೆ ಈ ಮೂಲಕ ಮಂಗಳೂರು ಮಂಡಲದಲ್ಲಿ ೫೦,೦೦೦ ಸಾವಿರದ ಗುರಿ ಮುಟ್ಟಬೇಕು ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹೇಳಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಜಿಲ್ಲಾ ವಕ್ತಾರ ರಾದ ಮೋಹನ್ ರಾಜ್ ಕೆ.ಆರ್., ಜಿಲ್ಲಾ ಸಹಕಾರ ಪ್ರಕೋಷ್ಠದ ಸಂಚಾಲಕರಾದ ರಾಜಾರಾಮ ಭಟ್, ಫಲಾನುಭವಿ ಪ್ರಕೋಷ್ಠದ ಸಂಚಾಲಕರಾದ ಶ್ರೀಮತಿ ಜಯಶ್ರೀ ಕರ್ಕೇರ, ಮಂಡಲದ ಪ್ರಧಾನ ಕಾರ್ಯದರ್ಶಿ ಗಳಾದ ದಯಾನಂದ ತೊಕ್ಕೊಟು, ಸುಜೀತ್ ಮಾಡೂರು, ಮಂಡಲದ ಸೇವಾ ಪಾಕ್ಷಿಕದ ಸಹ ಸಂಚಾಲಕರಾದ ಭರತ್ ಗಟ್ಟಿ, ಶ್ರೀಮತಿ ಸುಮನಾ ಶೆಟ್ಟಿ, ವೇದಿಕೆಯಲ್ಲಿದ್ದರು.
ಸೇವಾ ಪಾಕ್ಷಿಕದ ಸಹ ಸಂಚಾಲಕರಾದ ಜೀವನ್ ಕುಮಾರ್ ತೊಕ್ಕೊಟು ಸ್ವಾಗತಿಸಿದರು. ಸಂಚಾಲಕರಾದ ಮನೋಜ್ ಆಚಾರ್ಯ ವಂದಿಸಿದರು.