Site icon Ullalavani

ಪ್ರಧಾನಿ ಮೋದಿ ಹುಟ್ಟುಹಬ್ಬ ಪ್ರಯುಕ್ತ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ತಲಪಾಡಿ: ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಂಜನಾಡಿ ಮಹಾ ಶಕ್ತಿಕೇಂದ್ರದ ವತಿಯಿಂದ ಪ್ರಧಾನಿ ಮೋದಿಯವರ ೭೪ ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಧೃಡ ಆರೋಗ್ಯ, ದೀರ್ಘ ಆಯುಷ್ಯಕ್ಕಾಗಿ ಹಾಗೂ ದೇಶ ಸುಭಿಕ್ಷೆಯಲ್ಲಿರುವಂತೆ ಪ್ರಾರ್ಥಿಸಲಾಯಿತು.
ಈ ಸಂಧರ್ಭದಲ್ಲಿ ಸಹಕಾರಿ ಪ್ರಕೋಷ್ಠ ರಾಜ್ಯ ಕಾರ್ಯಕಾರಿಣಿ ಸದಸ್ಯರು ಮತ್ತು ತಲಪಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಆಳ್ವ, ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಮಂಜನಾಡಿ ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ರಾಜೇಶ್ ಗುಡ್ಡಮನೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ವರುಣ್ ರಾಜ್ ತಲಪಾಡಿ, ತಲಪಾಡಿ ಶಕ್ತಿಕೇಂದ್ರ ಪ್ರಮುಖ್ ಸತ್ಯರಾಜ್ ತಲಪಾಡಿ, ಮಂಡಲ ರೈತ ಮೋರ್ಚಾ ಸದಸ್ಯರಾದ ಕೇಶವ ಮಂಡೆಕಟ್ಟ, ಪಂಚಾಯತ್ ಸದಸ್ಯರಾದ ನವೀನ್ ಆಳ್ವ ದೇವಿನಗರ, ಮಾಜಿ ಪಂಚಾಯತ್ ಸದಸ್ಯರಾದ ಗೋಪಾಲಕೃಷ್ಣ ಮೇಲಾಂಟ ಹಾಗೂ ಬೂತ್ ಅಧ್ಯಕ್ಷರಾದ ಪುನೀತ್ ದೇವೀನಗರ ಉಪಸ್ಥಿತರಿದ್ದರು.

Exit mobile version