Site icon Ullalavani

ಸೆ.21-22ರಂದುಮುಡಿಪುವಿನಲ್ಲಿ ಕೆ.ಎ.19-20 ಯುನೈಟಡ್ ಆಫ್ ರೋಡರ್ಸ್ ವತಿಯಿಂದ ಕುಡ್ಲ ಛಾಲೆಂಜ್ ಸೀಸನ್-4

ಮುಡಿಪು: ಕೆ.ಎ 19-20 ಯುನೈಟಡ್ ಆಫ್ ರೋಡರ್ಸ್ ಆಯೋಜಿಸಿರುವ ಕುಡ್ಲ ಛಾಲೆಂಜ್ ಸೀಸನ್ -4 ಆಫ್ ರೋಡಿಂಗ್ ಸ್ಪರ್ಧೆ ಮುಡಿಪು ನವೋದಯ ಶಾಲೆಯ ನಾರ್ಯಗುತ್ತು ಕ್ರೀಡಾಂಗಣದಲ್ಲಿ ಸೆ.21 ಮತ್ತು22 ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಅವಿನಾಶ್ ಅಡಪ ತಿಳಿಸಿದರು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆಸಲಾಯಿತು.

ತೊಕ್ಕೊಟ್ಟುವಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆ.ಎ 19-20 ಯುನೈಟಡ್ ಆಫ್ ರೋಡರ್ಸ್ ಐದು ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಈಗಾಗಲೇ ಮೂರು ಈವೆಂಟ್ ಗಳನ್ನು ಆಯೋಜಿಸಿದೆ. ಈಗಾಗಲೇ 105 ವಾಹನಗಳು ಎಂಟ್ರಿಯನ್ನು ಪಡೆದಿದ್ದು, ದೇಶದಲ್ಲೇ ಮೊದಲ ಬಾರಿಗೆ ಇಂತಹ ದೊಡ್ಡಮಟ್ಟಿನ ಆಫ್ ರೋಡಿಂಗ್ ಆಯೋಜನೆ ಮಾಡಲಾಗಿದೆ. ಪೆಟ್ರೋಲ್ ಸ್ಟಾಕ್, ಡಿಸೀಲ್ ಸ್ಟಾಕ್, ಸೇರಿದಂತೆ ಐದು ವಿಧಗಳಲ್ಲಿ ಸ್ಪರ್ಧೆ ನಡೆಯಲಿದೆ. ಕ್ಲಬ್ ಈಗಾಗಲೇ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಎನ್ ಡಿಆರ್ ಎಫ್ ಜೊತೆಗೆ ಡ್ರಿಲ್ ನಲ್ಲಿಯೂ ಭಾಗಿಯಾಗಿದ್ದು, ನೆರೆಹಾವಳಿ ಸಂದರ್ಭ ಸಂತ್ರಸ್ತರನ್ನು ರಕ್ಷಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ತಮ್ಮ ವಿಶಿಷ್ಟ ಶೈಲಿಯ ವಾಹನಗಳ ಮೂಲಕ ಸಂತ್ರಸ್ತರ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ಜಾಗರೂಕರಾಗಿ ಭಾಗವಹಿಸುವಂತೆ, ಅಳವಡಿಸಿರುವ ಸೂಚನೆಗಳನ್ನು ಪಾಲಿಸಬೇಕಾಗಿದೆ. ಸುರಕ್ಷತೆ ದೃಷ್ಟಿಯಿಂದ ಸರಕಾರದ ಎಲ್ಲಾ ಇಲಾಖೆಗಳ ಅನುಮತಿಗಳನ್ನು ಪಡೆದುಕೊಂಡಿದ್ದು, ಅಗ್ನಿ ಶಾಮಕ ದಳ, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಆಂಬ್ಯುಲೆನ್ಸ್ ಹಾಗೂ ವೈದ್ಯರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ. ಸ್ಕಿಲ್ಡ್ ವಾಹನಗಳಿಗೆ ಮಾತ್ರ ಅವಕಾಶವಿದ್ದು, ಸ್ಪರ್ಧಾಳುಗಳಿಗೂ ಸೇಫ್ಟಿ ವೆಲ್ಡ್ ರೂಲ್ ಬುಕ್ ನಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ರೋಲ್ ಗೇಜ್, ಹೆಲ್ಮೆಟ್ ಧರಿಸಿಯೇ ಟ್ರ್ಯಾಕ್ ಗೇ ಇಳಿಯತಕ್ಕದ್ದು. ಕರಾವಳಿ ಮೂಲದ ಖ್ಯಾತ ಆಫ್ ರೋಡರ್ ಅಶ್ವಿನ್ ನಾಯಕ್ ಸೇರಿದಂತೆ ವಿವಿಧ ರಾಜ್ಯಗಳ ಖ್ಯಾತಿಯನ್ನು ಹೊಂದಿರುವ ಜಯ ಗಳಿಸಿದ ಆಫ್ ರೋಡರ್ ಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಮಹಿಳಾ ಕ್ಲಾಸ್ ಗೂ ಎಂಟ್ರಿ : ಮಹಿಳೆಯರಿಗೂ ಉತ್ತೇಜನ ನೀಡುವ ಸಲುವಾಗಿ ಮಹಿಳಾ ಕ್ಲಾಸ್ ನ್ನು ಸ್ಪೃರ್ಧೆಯಲ್ಲಿ ಆಯೋಜಿಸಲಾಗಿದೆ. ಈಗಾಗಲೇ 5 ಎಂಟ್ರಿಗಳನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ವೆಬ್ಸೈಟ್ ಮೂಲಕ ಎಂಟ್ರಿಗಳನ್ನು ದಾಖಲಿಸಲಾಗಿದ್ದು, ಪರಿಣತಿಯನ್ನು ಹೊಂದಿದವವರ ಮಾತ್ರ ಎಂಟ್ರಿ ಪಡೆಯಲಾಗಿದೆ. ಒಟ್ಟು 15 ಲಕ್ಷ ರೂ. ವೆಚ್ಚದ ಕಾರ್ಯಕ್ರಮ ಇದಾಗಿದ್ದು. 8.5 ಲಕ್ಷ ರೂ. ವೆಚ್ಚದಲ್ಲಿ ವಿಜೇತರಿಗೆ ನಗದು ಪುರಸ್ಕಾರವನ್ನು ನೀಡಲಿದ್ದೇವೆ. ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ. ಜೊತೆಯಲ್ಲಿ ಸರ್ಫಿಂಗ್, ಕಯಾಕಿಂಗ್ ನಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶದಿಂದ ಸರಕಾರದ ಜೊತೆಗೆ ಮಾತನಾಡುವವರಿದ್ದೇವೆ.
ಎರಡು ದಿನಗಳು ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ಸ್ಪೃರ್ಧೆಯನ್ನು ಆಯೋಜಿಸಲಾಗಿದ್ದು, ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ನಾಸೀರ್ ನಡುಪದವು, ವಿಜೇಶ್ ನಾಯ್ಕ್, ಖುಷಿತ್ ಕುಮಾರ್ ಉಪಸ್ಥಿತರಿದ್ದರು.

Exit mobile version