Site icon Ullalavani

ಪ್ರವಾದಿ ಸಂದೇಶ ಅಭಿಯಾನ ಪ್ರಯುಕ್ತ ಪುಸ್ತಕ ಬಿಡುಗಡೆ

ಉಳ್ಳಾಲ: ಪ್ರವಾದಿ ಜನ್ಮ ದಿನಾಚರಣೆ ಎಂಬುದು ಇಸ್ಲಾಮಿ ನಲ್ಲಿ ಇಲ್ಲ. ಇದರ ಬದಲಾಗಿ ಅವರ ಜನ್ಮ ತಿಂಗಳಿನಲ್ಲಿ ಪ್ರವಾದಿ ಅವರನ್ನು ಪರಿಚಯಿಸುವ,ಅವರ ಸಂದೇಶ ಸಾರುವ ಅಭಿಯಾನ ಮಾಡಲಾಗುತ್ತದೆ ಎಂದು ಮಸ್ಜುದುಲ್ ಹುದಾ ತೊಕ್ಕೊಟ್ಟು ಇದರ ಖತೀಬ್ ಮೊಹಮ್ಮದ್ ಕುಂಞಿ ಹೇಳಿದರು.


ಅವರು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ( ಸ) ಮಹಾನ್ ಚಾರಿತ್ರ್ಯ ವಂತ ಎಂಬ ವಿಚಾರದಲ್ಲಿ ನಡೆಯುವ ಸಂದೇಶ ಅಭಿಯಾನ ಪ್ರಯುಕ್ತ ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಸಂದೇಶ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪುಸ್ತಕ ಬಿಡುಗಡೆ ಯನ್ನು ಮಾಡಿದರು.
ಜಮಾತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಕೋಶಾಧಿಕಾರಿ ಪುಷ್ಪ ರಾಜ್, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತಬೈಲ್ ಉಪಸ್ಥಿತರಿದ್ದರು.

Exit mobile version