ಉಳ್ಳಾಲ: ಸಮಾನತೆ, ಸಹೋದರತೆ ಏಕತೆಯ ಸಂದೇಶವನ್ನು ಇಸ್ಲಾಮ್ ಸಾರಿದೆ, ಸಾವಿರದ ಐನೂರು ವರ್ಷಗಳ ಹಿಂದೆ ಪ್ರವಾದಿಯವರು ಸಾರಿದ ಈ ಸಂದೇಶ ಇಂದಿಗೂ ಪ್ರಸ್ತುತ, ಇದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಬರಬೇಕು. ಈದ್ ಜಾಥಾ ಸಮಾನತೆಯ ಸಂದೇಶ ನೀಡುವ ಜಾಥಾ ಆಗಬೇಕು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ಅವರು ಈದ್ ಮಿಲಾದ್ ಪ್ರಯುಕ್ತ ಕೋಟೆಪುರ ದಿಂದ ಮುಕ್ಕಚೇರಿ ಅಜಾದ್ ನಗರ ರಸ್ತೆ ಯಾಗಿ ಉಳ್ಳಾಲ ದರ್ಗಾಕ್ಕೆ ನಡೆದ ಕಾಲ್ನಡಿಗೆ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಈವರೆಗೆ ನಮ್ಮ ಈದ್ ಜಾಥಾ ಅಚ್ಚುಕಟ್ಟಾಗಿ ನಡೆದಿದೆ, ಯಾವುದೇ ಅಹಿತಕರ ಘಟನೆಗಳಿಗೆ, ಅನಗತ್ಯ ಘೋಷಣೆಗಳಿಗೆ ಅವಕಾಶ ನೀಡದೇ ಜಾಥಾ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು.
ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಇಬ್ರಾಹಿಂ ಸ ಅದಿ, ಕೋಟೆಪುರ ಮಸೀದಿ ಖತೀಬರಾದ ಇರ್ಷಾದ್ ಸಖಾಫಿ, ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರಾದ ಅಹ್ಮದ್ ಕುಟ್ಟಿ ಸಖಾಫಿ, ಮುಹಮ್ಮದ್ ಫೈಝಿ ಮೋಂಗಮ್ ದುಆ ಆಶೀರ್ವಾದ ನೀಡಿದರು,
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು, ಕೋಟೆಪುರ ಮಸೀದಿ ಅಧ್ಯಕ್ಷ ಅಬ್ಬಾಸ್ ಕೋಟೆಪುರ ಅತಿಥಿಗಳನ್ನು ಬರ ಮಾಡಿಕೊಂಡರು.
ಮೌಲೂದು ಪಾರಾಯಣ ,ಪ್ರವಾದಿಯವರ ಸಂದೇಶಗಳನ್ನು ಮಾತ್ರ ಸಮಾಜಕ್ಕೆ ಸಾರುತ್ತಾ,ಯಾವುದೇ ಬ್ಯಾನರ್ , ಬ್ಲಂಟಿಂಕ್ಸ್ ಗಳಿಗೆ ಅವಕಾಶ ನೀಡದೇ ನಡೆದ ಈ ರ್ಯಾಲಿ ದೇವಸ್ಥಾನಗಳ ಬಳಿ ಮೌನವಾಗಿ ಸಾಗಿತು ಶಾಂತಿಯುತವಾಗಿ ನಡೆದ ಈ ಸೌಹಾರ್ದತೆಯ ಸಂದೇಶಕ್ಕೆ ಪೊಲೀಸ್ ಇಲಾಖೆಯಿಂದಲೇ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಉಳ್ಳಾಲ ನಗರ ಸಭೆ ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸಪ್ನಾ ಹರೀಶ್ ಅವರು ದರ್ಗಾಕ್ಕೆ ಆಗಮಿಸಿದ ರ್ಯಾಲಿ ಯಲ್ಲಿ ಭಾಗವಹಿಸಿದ ಸ್ಪೀಕರ್ ಯುಟಿ ಖಾದರ್ ಹಾಗೂ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ದರ್ಗಾ ಕೋಶಾಧಿಕಾರಿ ನಾಝಿಮ್ ಮುಕಚೇರಿ, ಲೆಕ್ಕ ಪರಿಶೋದಕ ಫಾರೂಕ್ ಕಲ್ಲಾಪು,ಜೊತೆ ಕಾರ್ಯದರ್ಶಿ ಇಸಾಕ್ ಮೇಲಂಗಡಿ, ಮುಸ್ತಫಾ ಮದನಿನಗರ ,ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ, ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ, ಜೊತೆ ಕಾರ್ಯದರ್ಶಿ ಸೈಯದ್ ಜಲಾಲ್ ತಂಙಳ್ , ಕೋಶಾಧಿಕಾರಿ ಮುಸ್ತಫಾ ದಾರಂದ ಬಾಗಿಲು, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಜಬ್ಬಾರ್ ಮೇಲಂಗಡಿ, ಕೋಶಾಧಿಕಾರಿ ಫಾರೂಕ್ ಅಬೂಬಕ್ಕರ್ ಮುಕಚೇರಿ, ಜೊತೆ ಕಾರ್ಯದರ್ಶಿ ಅಝೀಝ್ ಕೋಡಿ, ದರ್ಗಾ ಮಾಜಿ ಅಧ್ಯಕ್ಷರಾದ ಹಂಝ ಹಾಜಿ, ಮಾಜಿ ಉಪಾಧ್ಯಕ್ಷ ಯು.ಕೆ ಮೋನು ಇಸ್ಮಾಯೀಲ್, ಕೋಟೆಪುರ ಮಸೀದಿ ಅಧ್ಯಕ್ಷ ಅಬ್ಬಾಸ್ ಕೋಟೆಪುರ, ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
