ಉಳ್ಳಾಲ: ಇಲ್ಲಿನ ದರ್ಗಾ ದ ಅರೇಬಿಕ್ ಟ್ರಸ್ಟ್ ನ ಮಾಜಿ ಉಪಾಧ್ಯಕ್ಷರೂ, ಮಾಜಿ ಶಾಸಕ ಯುಟಿ ಫರೀದರ ಆಪ್ತರೂ ಆಗಿದ್ದ ಕೊಟ್ಟಾರ ಅಹ್ಮದ್ ಬಾವರ ಅವರು(67) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಉಳ್ಳಾಲದ ಕೊಟ್ಟಾರ ನಿವಾಸಿ ಆಗಿದ್ದ ಅವರು ಉಳ್ಳಾಲ ಸೆಂಟ್ರಲ್ ಕಮಿಟಿ, ಉಳ್ಳಾಲ
ಸೋಶಿಯಲ್ ಮೂವ್ ಮೆಂಟ್, ಸಹಿತ ಹಲವು ಸಂಘ-ಸಂಸ್ಥೆಗಳ ಸ್ಥಾಪಕ ಸಂಚಾಲಕರು, ಹಿರಿಯ ಸಿವಿಲ್ ಗುತ್ತಿಗೆದಾರರೂ ಆಗಿ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ , ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ: ಕೆಪಿಸಿಸಿ ಸಂಯೋಜಕ-ಫಾರೂಕ್ ಉಳ್ಳಾಲ್, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್, ಮಾಜಿ ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಮಾಜಿ ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್,
ಸಮಸ್ತ ನಾಯಕ ಯುಟಿ ಮುಹಮ್ಮದ್ ಹಾಜಿ, ಪೇಟೆ ಮಸೀದಿ ಅಧ್ಯಕ್ಷ ಮೊಹಿದ್ದೀನ್ ಹಾಜಿ, ಹೊಸಪಳ್ಳಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲ,ಎಸ್ ವೈ ಎಸ್ ಉಳ್ಳಾಲ ಘಟಕ ಅಧ್ಯಕ್ಷ ಕೆ.ಎಸ್ ಮೊಯ್ದಿನ್,ಉಳ್ಳಾಲ ದರ್ಗಾ ಮಾಜಿ ಕಾರ್ಯದರ್ಶಿ ತ್ವಾಹ ಹಾಜಿ ಸಂತಾಪ ಸೂಚಿಸಿದ್ದಾರೆ.
