ಕುತ್ತಾರು: ಮುನ್ನೂರು ಗ್ರಾಮ ಪಂಚಾಯತ್ ಇದರ ವಾರ್ಷಿಕ ಜಮಾಬಂದಿ ಕಾರ್ಯಕ್ರಮ ಸೆ.12(ಇಂದು) ಪಂಚಾಯತ್ ಸಭಾಭವನದಲ್ಲಿ ಜರಗಲಿದ್ದು, ಗ್ರಾಮಸ್ಥರು ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರ ಗ್ರಾ.ಪಂ ಆಡಳಿತ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಕಂದಾಯ ಇಲಾಖೆಯಲ್ಲಿದ್ದಂತೆ ವಾರ್ಷಿಕ ಜಮಾಬಂದಿ ಕಾರ್ಯಕ್ರಮ ಜಾರಿಗೊಳಿಸಿದೆ. ಕಾರ್ಯಕ್ರಮದಲ್ಲಿ ಆಡಳಿತ ನಿರ್ವಹಣೆ, ದರ ಮತ್ತು ತೆರಿಗೆ ವಸೂಲಿ, ಪಂಚಾಯತ್ ಆಸ್ತಿಗಳ ನಿರ್ವಹಣೆ, ಅನುದಾನ ಬಳಕೆ, ಸಾರ್ವಜನಿಕ ಸುರಕ್ಷತೆ ಗ್ರಾಮ ಪಂಚಾಯಿತಿನಿಂದ ಕಾರ್ಯಗತಗೊಳಿಸುವ ಸಾರ್ವಜನಿಕ ಕಾಮಗಾರಿ, ನಾಗರಿಕ ಸೌಕರ್ಯಗಳು ಮತ್ತು ಋಣ ಶೀರ್ಷಿಕೆಗಳ ಪಾವತಿ ಪರಿಶೀಲಿಸುವ ಕಾರ್ಯಕ್ರಮ ಒಳಗೊಂಡಿರುತ್ತದೆ. ಜಮಾ ಬಂದಿ ಅಧಿಕಾರಿಗಳಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಉಪಸ್ಥಿತರಿರುವರು ಎಂದು ಪಂ.ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಸಿಂಪಿಗೇರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸರ್ವರನ್ನು ಅಧ್ಯಕ್ಷರು ವಿಶಾಲಾಕ್ಷಿ, ಉಪಾಧ್ಯಕ್ಷರಾದ ಮಹಾಬಲ ಟಿ. ದೆಪ್ಪೆಲಿಮಾರ್ ಗ್ರಾಮಸ್ಥರು ಹಾಜರಿರುವಂತೆ ಕೋರಿದ್ದಾರೆ.
