Site icon Ullalavani

`ಬಹುತೇಕ ರಾಜ್ಯಗಳ ಚಲನಚಿತ್ರಗಳತಂಡದಿAದ ಹಾಡಲು ಆಫರ್ ಬಂದಿದೆ’ : ಗಾಯಕ ಜಸ್ಕರನ್ ಸಿಂಗ್

ಉಳ್ಳಾಲ: ಮಲಯಾಳಂ , ತಮಿಳು , ಕನ್ನಡ , ಪಂಜಾಬ್, ಚಲನಚಿತ್ರಗಳ ತಂಡದಿAದ ಹಾಡು ಹಾಡಲು ಸಾಲು ಸಾಲಾಗಿ ಆಫರ್‌ಗಳು ಬಂದಿದ್ದು, ಪ್ರಮುಖವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಜೊತೆಗೆ ಮತ್ತೊಂದು ಹಾಡು ರೆಕಾರ್ಡಿಂಗ್ ಪೂರ್ಣಗೊಂಡಿದ್ದು ಎಲ್ಲರ ಆಶೀರ್ವಾದವಿದ್ದಲ್ಲಿ ಮತ್ತೊಮ್ಮೆ ಜನಮನ ಗೆಲ್ಲುವ ವಿಶ್ವಾಸ ನನ್ನಲ್ಲಿದೆ ಎಂದು ದ್ವಾಪರ ದಾಟುತ ನನ್ನನೆ ನೋಡಲು ನನ್ನನೆ ಸೇರಲು ಬಂದ ರಾಧಿಕೆ…”ಹಾಡಿನ ಮೂಲಕ ಖ್ಯಾತಿ ಪಡೆದ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕ ಜಸ್ಕರನ್ ಸಿಂಗ್ ಹೇಳಿದ್ದಾರೆ.

ತೊಕ್ಕೊಟ್ಟು ಕಲ್ಲಾಪುವಿನ ಬುರ್ದುಗೋಳಿಯ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಮಂಗಳೂರಿನ ಕದ್ರಿ ಮತ್ತು ಬುರ್ದುಗೋಳಿಯ ಗುಳಿಗ-ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ವಿಭಿನ್ನವಾದ ದೈವಿಕ ಭಾವನೆ ಜಾಗೃತಗೊಂಡಿದ್ದು, ಮಂಗಳೂರಿನ ಪ್ರದರ್ಶನದ ಯಶಸ್ಸಿಗೂ ದೈವ,ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. ಜೊತೆಗೆ ಸೋಲೊ ಆಲ್ಬಂ ಹಾಡುಗಳನ್ನು ತಯಾರಿಸುತ್ತಿದ್ದು, ಸಿಂಗಲ್ ಪ್ರಾಜೆಕ್ಟ್ ಗಳಿಗೆ ಜಾಸ್ತಿ ಒತ್ತು ಕೊಡುತ್ತಿದ್ದೇನೆ . ಎಲ್ಲರ ಪ್ರೀತಿ ವಿಶ್ವಾಸ ತನ್ನನ್ನು ಹಾರೈಸಿ ಬೆಳೆಸಿದ್ದು, ಇನ್ನೂ ಮುಂದುವರಿಯಲಿ ಎಂದರು.

ಬುರ್ದುಗೋಳಿ ಕ್ಷೇತ್ರದ ವತಿಯಿಂದ ಜಸ್ಕರನ್ ಸಿಂಗ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಝೀ ಕನ್ನಡ ಸರೆಗಮಪ ಖ್ಯಾತಿಯ ಹಾಡುಗಾರ ಅಮಿಷ್ ಕುಮಾರ್ ಕೆ, ಕದ್ರಿ ಈವೆಂಟ್ಸ್ ನ ಪ್ರಮುಖರಾದ ಜಗದೀಶ್ ಕದ್ರಿ ಜಸ್ಕರನ್ ಸಿಂಗ್ ಜತೆಯಲ್ಲಿದ್ದರು. ಬುರ್ದುಗೋಳಿ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ಕ್ಷೇತ್ರದ ಆಡಳಿತ ಕಮಿಟಿಯ ಗೌರವ ಸಲಹೆಗಾರರಾದ ಚಂದ್ರಹಾಸ್ ಪಂಡಿತ್ ಹೌಸ್, ಕೋಶಾಧಿಕಾರಿ ನವೀನ್ ಕಾಯಂಗಳ,ಕಾರ್ಯದರ್ಶಿ ಜಯಶ್ರೀ ಕೊಟ್ಟಾರಿ, ಸದಸ್ಯರಾದ ಪ್ರಶಾಂತ್ ಕಾಯಂಗಲ, ಪುರುಷೋತ್ತಮ ಮೇಲಾಂಟ,ಪುರಷೋತ್ತಮ ಕಲ್ಲಾಪು, ಸಂಜಯ್, ಅಮಿತ ಕೊಟ್ಟಾರಿ, ವನಿತ ಗಂಡಿ, ದೀಕ್ಷ, ಹರೀಶ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.

Exit mobile version