Site icon Ullalavani

ಉಳ್ಳಾಲ ನಗರಕ್ಕೆ ೨೪ ಗಂಟೆ ನೀರುಪ್ರಾಯೋಗಿಕ ಹಂತದ ಯಶಸ್ವಿಯನ್ನು ಪರಿಶೀಲಿಸಿದ ಸ್ಪೀಕರ್ ಯು.ಟಿ.ಖಾದರ್

ತೊಕ್ಕೊಟ್ಟು : ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಥಮ ಹಂತದ ಪ್ರಾಯೋಗಿಕ ಟ್ರಯಲ್ ರೌಂಡ್ ಇಂದು ಆರಂಭಿಸಲಾಗಿದೆ. ಗುಣಮಟ್ಟ ಪರಿಶೀಲಿಸಿದ ನಂತರ ಮೊದಲ ಹಂತದ ಯೋಜನೆಗೆ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಉಳ್ಳಾಲ ನಗರಕ್ಕೆ ಬೇಕಾದಂತಹ ೭೦ ಲಕ್ಷ ಲೀ. ಟ್ಯಾಂಕಿಗೆ ಪಜೀರು ಟ್ರೀಟ್ ಮೆಂಟ್ ಪ್ಲಾö್ಯಂಟ್ ನಿಂದ ಬಿಡುಗಡೆಗೊಳಿಸಿದ ಪ್ರಾಯೋಗಿಕ ಹಂತದ ನೀರು ಬರುವುದನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು.
ಗ್ರಾಮೀಣ ಮತ್ತು ನಗರ ಮಟ್ಟಿಗೆ ೨೪ ಗಂಟೆಗಳ ಕಾಲ ನೀರು ಕೊಡಬೇಕೆಂಬುದು ದೊಡ್ಡ ಕನಸ್ಸು. ಕಳೆದ ಚುನಾವಣೆ ಸಂದರ್ಭ ಮಾತು ಕೊಟ್ಟಂತೆ ಮುಂದಿನ ಕೆಲ ತಿಂಗಳುಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಿಗೆ ನೀರು ಸರಬರಾಜು ಆಗಲಿದೆ. ೧೯೮ ಕೋಟಿ ರೂ. ಯೋಜನೆಯಡಿ ಸಜಿಪದಲ್ಲಿ ವಾಟರ್ ಜ್ಯಾಕ್ಯುವೆಲ್ ನಿರ್ಮಾಣ ಮಾಡಲಾಗಿದೆ. ಅಲ್ಲಿಂದ ನೀರನ್ನು ಲಿಫ್ಟ್ ಮಾಡಿ ಕೊಣಾಜೆ-ಪಜೀರು ಮಧ್ಯಭಾಗದಲ್ಲಿರುವ ಆಧುನಿಕ ತಾಂತ್ರೀಕೃತ ಟ್ರೀಟ್ ಮೆಂಟ್‌ಗೆ ನೀರು ಬರುತ್ತದೆ . ಅಲ್ಲಿಂದ ಪೈಪ್ ಲೈನ್ ಮುಖಾಂತರ ಎಲ್ಲಾ ಗ್ರಾಮ ಹಾಗೂ ನಗರ ಮಟ್ಟಕ್ಕೆ ನೀರು ತಲುಪಲಿದೆ. ಉಳ್ಳಾಲ ನಗರಕ್ಕೆ ಬೇಕಾದಂತಹ ೭೦ ಲಕ್ಷ ಲೀ. ಟ್ಯಾಂಕನ್ನು ಚೆಂಬುಗುಡ್ಡೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಎಡಿಬಿ ಯೋಜನೆಯಡಿ ಅಳವಡಿಸಿದ ಪೈಪ್ ಲೈನ್ ಮುಖೇನ ನೀರು ಸರಬರಾಜು ಆಗಲಿದೆ. ೨೦೦೨ ರಲ್ಲಿ ಪೈಪ್‌ಲೈನ್ ಆಗಿದ್ದರೂ ಅಂದು ಮಾಸ್ತಿಕಟ್ಟೆ , ಆಝಾದ್ ನಗರ, ಒಂಭತ್ತುಕರೆ, ಮುಕ್ಕಚ್ಚೇರಿ ಭಾಗಗಳಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಜಾಗ ಕೇಳಿದರೂ ಸಿಗಲಿಲ್ಲ. ಅದಕ್ಕಾಗಿ ಸೋಮೇಶ್ವರ-ಉಲ್ಳಾಲ ಮಧ್ಯಭಾಗದಲ್ಲಿರುವ ಕುಂಪಲ ಆಶ್ರಯಕಾಲನಿ ಸೈಟ್ ಮೇಲೆ ಅನುಮತಿ ಪಡೆದುಕೊಂಡು ಟ್ಯಾಂಕ್ ನಿರ್ಮಾಣ ಆರಂಭಿಸಲಾಗಿದೆ. ಪೈಪ್ ಲೈನ್ ಇಲ್ಲದ ಕಡೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಆರು ತಿಂಗಳ ಒಳಗಡೆ ಉಳ್ಳಾಲ ವ್ಯಾಪ್ತಿಯ ಕಾಮಗಾರಿಗಳನ್ನು ಪೂರೈಸಲಾಗುವುದು. ಕೋಟೆಕಾರು ಮತ್ತು ಸೋಮೇಶ್ವರ ಭಾಗಕ್ಕೆ ೧೩೪ ಕೋಟಿ ರೂ. ಆಂತರಿಕ ಪೈಪ್ ಲೈನ್ ಮತ್ತು ಟ್ಯಾಂಕ್ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ಗ್ರಾಮೀಣ ಮಟ್ಟದಲ್ಲಿ ಮುಖ್ಯ ಪೈಪ್ ಲೈನ್ ಅಳವಡಿಕೆಯಾಗಿದೆ. ಅಲ್ಲಿ ಕೆಯುಡಬ್ಲುö್ಯಸಿ ಜತೆಗೆ ಚರ್ಚಿಸಿ ಪ್ರತಿ ಮನೆಗೂ ತಲುಪಿದ ಜಲಜೀವನ್ ಮಿಷನ್ ಪೈಪ್ ಮುಖೇನ ನೀರು ಸರಬರಾಜು ಆಗಲಿದೆ. ಒಂದು ಗ್ರಾವದಲ್ಲಿ ಒಂದು ಅಥವಾ ಎರಡು ಟ್ಯಾಂಕ್ ಗಳ ನಿರ್ಮಾಣ ಮಾಡಲಾಗುವುದು. ಅಲ್ಲಿಂದ ಜಲಜೀವನ್ ಮಿಷನ್ ಟ್ಯಾಂಕುಗಳಿಗೆ ನೀರು ಬಿಡಲಾಗುತ್ತದೆ . ನೀರು ದುರ್ಬಳಕೆಯಾಗದಂತೆ ಪ್ರತಿಯೊಂದು ಮನೆಗಳಿಗೂ ಮೀಟರ್ ಅಳವಡಿಸುವ ಯೋಜನೆಯನ್ನು ರೂಪಿಸಲಾಗಿದೆ. ಎರಡು ವರ್ಷಗಳಲ್ಲಿ ಸಂಪೂರ್ಣ ಕ್ಷೇತ್ರಕ್ಕೆ ನೀರು ಸರಬರಾಜು ಆಗುವ ವಿಶ್ವಾಸವಿದೆ. ತನ್ನ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಮೌಲ್ಯಾಧಾರಿತ ಮತದಿಂದ ಮಹತ್ತರ ಯೋಜನೆಯನ್ನು ಯಶಸ್ವಿಗೊಳಿಸಲು ಸಾಧ್ಯವಾಗಿದೆ ಎಂದರು.

ವರ್ತಕರು-ರಿಕ್ಷಾ ಚಾಲಕರ ಜತೆ ಸಭೆ
ಚೆಂಬುಗುಡ್ಡೆಯಿAದ ತೊಕ್ಕೊಟ್ಟು ರಸ್ತೆಯನ್ನು ಆರು ಲೇನ್ ಆಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿದೆ. ರೂ. ೨೫ ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಕಾಮಗಾರಿಗೂ ಮುನ್ನ ವರ್ತಕರು, ವ್ಯಾಪಾರಸ್ಥರು, ರಿಕ್ಷಾ ಚಾಲಕರ ಜೊತೆಗೆ ಚರ್ಚಿಸಿ ಬದಲಾವಣೆಗಳಿದ್ದಲ್ಲಿ ಮಾಡಿ ಕಾಮಗಾರಿ ಆರಂಭಿಸಲಾಗುವುದು.

ವಿದ್ಯುತ್ ಅಧಿಕ ಕೆ.ವಿಗೆ ಪರಿವರ್ತನೆ:
ಈಗಾಗಲೇ ಇರುವ ೩೦ ಕೆ.ವಿ ವಿದ್ಯುತ್ ಅನ್ನು ೧೩೨ ಕೆ.ವಿಯಾಗಿ ಪರಿವರ್ತನೆಗೆ ಯೋಜನೆ ರೂಪಿಸಲಾಗಿದೆ. ಕೊಣಾಜೆ ಮತ್ತು ಕೋಟೆಕಾರು ಸಬ್ ಸ್ಟೇಷನ್ ಈಗಾಗಲೇ ತೆರೆಯಲಾಗಿದೆ. ಮುಡಿಪುವಿನಿಂದ ಅಂಡರ್ ಗ್ರೌಂಡ್ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುವುದು. ಈ ಹಿಂದೆ ನಗರದ ಕಾವೂರಿನಿಂದ ವಿದ್ಯುತ್ ಸರಬರಾಜು ಆಗಿ ಓವರ್ ಲೋಡ್ ಸಮಸ್ಯೆಗಳು ಅಧಿಕವಾಗಿತ್ತು. ಪರ್ಯಾಯವಾಗಿ ಜೆಪ್ಪಿನಮೊಗರುವಿನಿಂದ ವಿದ್ಯುತ್ ಪಡೆಯುವ ಯೋಜನೆಯನ್ನೂ ರಚಿಸಲಾಗಿದೆ.
೩೫ ವರ್ಷಗಳವರೆಗೆ ಕೊರತೆಯಾಗದ ರೀತಿಯಲ್ಲಿ ಯೋಜನೆ ರಚನೆಯಾಗಿದೆ. ಮುಂದಕ್ಕೆ ರೂ.೨೦೦ ಕೋಟಿ ಮೂಲಕ ಉಳ್ಳಾಲ ಹಾಗೂ ನಗರ ವ್ಯಾಪ್ತಿಗಳಲ್ಲಿ ಅಂಡರ್ ಗ್ರೌಂಡ್ ಕೇಬಲ್ ರಚಿಸಿ ಸ್ಮಾರ್ಟ್ ಸಿಟಿಯಂತೆ ರೂಪಿಸಲಾಗುವುದು. ಬೀದಿ ದೀಪ ಅಳವಡಿಕೆಗೆ ತೊಂದರೆಯಾಗದAತೆ ನಗರಸಭೆ ಸದಸ್ಯರು ಚರ್ಚಿಸಬೇಕಿದೆ.

ಒಳರೋಗಿ ದಾಖಲಾತಿ ಆರಂಭ:
ಉಳ್ಳಾಲ ಸಮುದಾಐ ಕೇಂದ್ರ ಆಸ್ಪತ್ರೆಗೆ ದಿನಕ್ಕೆ ೪೦೦ ಹೊರರೋಗಿಗಳು ಬರುತ್ತಾರೆ. ಇದೀzಗ ಒಳರೋಗಿಗಳ ದಾಖಲಾತಿಯೂ ಆರಂಭವಾಗಿದೆ. ಯುನಾನಿ, ಆಯುರ್ವೇದ, ಯೋಗ ಎಲ್ಲಾ ಥೆರಪಿಸ್ಟ್ ಗಳ ಆಗಮನವಾಗಿದೆ. ದಂತ ಚಿಕಿತ್ಸೆಯೂ ಆರಂಭವಾಗಿದೆ. ಶೀಘ್ರದಲ್ಲೇ ಉಚಿತ ಡಯಾಲಿಸಿಸ್ ಸೆಂಟರ್ ಕೂಡಾ ಆರಂಭಿಸಲಾಗುವುದು. ಡಯಾಲಿಸಿಸ್ ರೋಗಿಗಳು ಇದ್ದಲ್ಲಿ ಅರ್ಜಿಯನ್ನು ತಕ್ಷಣ ವೈದ್ಯ ಡಾ| ನಿತಿನ್ ಅವರಿಗೆ ತಲುಪಿಸಬೇಕಿದೆ. ವಾರಕ್ಕೆ ೭೫ ಜನರಿಗೆ ಮಾಡಬಹುದು,. ಹತ್ತಿರದವರು, ಉಳ್ಳಾಲ ವಿಧಾನಸಭಾ ಕ್ಷೇತ್ರದವರಿಗೆ ಮೊದಲ ಆದ್ಯತೆ ಎಂದರು.

ಅಗ್ನಿ ಶಾಮಕ ಘಟಕ ಆರಂಭ:
ಪಜೀರು ಭಾಗದಲ್ಲಿ ೨ ಎಕರೆ ಜಾಗವನ್ನು ಗುರುತಿಸಲಾಗಿದ್ದು, ಎಲ್ಲರ ಬೇಡಿಕೆಯಾಗಿದ್ದ ಅಗ್ನಿ ಶಾಮಕ ದಳದ ಕಚೇರಿಯೂ ಒಂದು ತಿಂಗಳ ತಿಂಗಳ ಒಳಗಡೆ ಕಾರ್ಯಾಚರಿಸಲಿದೆ.

ಈ ಸಂದರ್ಭ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸ್ವಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಶಾಂತಿ ಡಿಸೋಜ ನಗರಸಭೆ ಸದಸ್ಯರುಗಳಾದ ಬಾಝಿಲ್ ಡಿಸೋಜ, ಗೀತಾ ಬಾಯಿ, ಅಬ್ದುಲ್ ಅಝೀಝ್ ಉಳ್ಳಾಲ್, ಐಯೂಬ್ ಮಂಚಿಲ, ಯು.ಎ. ಇಸ್ಮಾಯಿಲ್, ಅಬ್ದುಲ್ ಜಬ್ಬಾರ್, ಅಝ್ಗರ್ ಅಲಿ, ಮೊಹಮ್ಮದ್ ಮುಕ್ಕಚ್ಚೇರಿ, ಖಲೀಲ್ ಉಳ್ಳಾಲ್, ನಾಮನಿರ್ದೇಶಿತ ಸದಸ್ಯ ರವಿ, ನೀರು ಕರ್ನಾಟಕ ಅರ್ಬನ್ ವಾಟರ್ ಬೋರ್ಡಿನ ಅಧಿಕಾರಿ ರೇಣುಕಾ, ನಗರಸಭೆ ಪ್ರಭಾರ ಪೌರಾಯುಕ್ತ ಮತ್ತಡಿ ಮುಂತಾದವರು ಉಪಸ್ಥಿತರಿದ್ದರು.

Exit mobile version