Site icon Ullalavani

ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ: ಡಾ. ಎಂ. ಬಿ. ಪುರಾಣಿಕ್

ತಲಪಾಡಿ: ಶಿಕ್ಷಣ ಹೇಗೆ ಮುಖ್ಯವೋ, ಹಾಗೆಯೇ ಶಿಕ್ಷಣ ನೀಡುವ ಗುರು ಅಷ್ಟೇ ಮುಖ್ಯ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ ಎಂದು ತುಳುನಾಡು ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಹೇಳಿದರು.
ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ, ಭೂವರಾಹ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾರದಾ ಸಮೂಹ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಬಂಧುಗಳಿಗೆ ಹಮ್ಮಿಕೊಳ್ಳಲಾದ ಗೌರವಾರ್ಪಣೆಯ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು.
ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದಕನ್ನು ಬೆಳಗುವವರು ಶಿಕ್ಷಕರಾಗಿರುವುದರಿಂದ, ಇಡೀ ಪ್ರಪಂಚವೇ ಅವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಡೊಂಗರಕೇರಿ ಕೆನರಾ ಹೆಣ್ಣು ಮಕ್ಕಳ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯಿನಿ ವಿಮಲಾ ಬಾಯಿ ಹಾಗೂ ಬೆಳ್ತಂಗಡಿ ಕಾಶಿಪಟ್ನ ದ.ಕ.ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಧ್ಯಾಯ ರಾಜು ಮಾಸ್ತರ್ , ಮತ್ತು ಶಾರದ ವಿದ್ಯಾಲಯದ ನಿವೃತ್ತ ಶಿಕ್ಷಕರಾದ ವಿಜಯಲಕ್ಷಿ÷್ಮ, ಶ್ರೀಪತಿ ಭಟ್, ಶಾರದ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮಹಾಬಲೇಶ್ವರ ರಾವ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುನಂದಾ ಪುರಾಣಿಕ್, ತುಳುನಾಡು ಎಜುಕೇಶನ್ ಟ್ರಸ್ಟ್ನ ನಿರ್ದೇಶಕರಾದ ಸಮೀರ್ ಪುರಾಣಿಕ್, ಉಪಾಧ್ಯಕ್ಷರಾದ ಸೀತರಾಮ ದಂಡತೀರ್ಥ, ವಿಸ್ವಸ್ತ ಮಂಡಳಿಯ ಸದಸ್ಯರಾದ ಪ್ರದೀಪ್ ಕಲ್ಕೂರ, ಸುಧಾಕರ್ ರಾವ್ ಪೇಜಾವರ, ಶಾರದಾ ವಿದ್ಯಾ ಸಂಸ್ಥೆಗಳ ಎಲ್ಲಾ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಶಿಕ್ಷಕ- ಶಿಕ್ಷಕೇತರ ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾರದಾ ವಿದ್ಯಾ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಬಂಧುಗಳು ಪ್ರಸ್ತುತ ಪಡಿಸಿದ ಆಕರ್ಷಕ ಸಾಂಸ್ಕöÈತಿಕ ಕಾರ್ಯಕ್ರಮ ಸಭಿಕರ ಮನಸೆಳೆಯಿತು. ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ. ಜಿ ಸ್ವಾಗತಿಸಿದರು. ಶಾರದ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ನಿರೂಪಿಸಿ ವಂದಿಸಿದರು.

Exit mobile version