Site icon Ullalavani

ಮಾನವೀಯತೆ ಮೆರೆದ ಚಾಲಕ-ನಿರ್ವಾಹಕನಿಗೆ ಹರೇಕಳ ಗ್ರಾಮಸ್ಥರ ಅಭಿನಂದನೆ


ಪಾವೂರು: ಕುಸಿದುಬಿದ್ದ ಮಹಿಳೆಯನ್ನು ಬಸ್ಸಿನಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ ಖಾಸಗಿ ಬಸ್ ಚಾಲಕ ಸವಾದ್ ಹರೇಕಳ ನಿವಾಸಿಯಾಗಿದ್ದು, ಇವರ ಮಾನವೀಯತೆಯ ಕಾರ್ಯಕ್ಕೆ ಹರೇಕಳ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮರ್ಸಿ ಬಸ್ ನಿರ್ವಾಹಕ ಯಾಕೂಬ್ , ಮಹಿಳೆ ಕುಸಿದುಬಿದ್ದಿರುವುದನ್ನು ಗಮನಿಸಿ ಚಾಲಕ ಸವಾದ್ ಬಳಿ ಹೇಳಿದ್ದಾರೆ. ತಕ್ಷಣವೇ ಮುಡಿಪುವಿನಿಂದ ನೇರವಾಗಿ ನಾಟೆಕಲ್ ಕಣಚೂರು ಆಸ್ಪತ್ರೆಯತ್ತ ಬಸ್ಸನ್ನು ಕೊಂಡೊಯ್ದ ಚಾಲಕ ಸವಾದ್ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಸಿಬ್ಬಂದಿ ಇಬ್ಬರ ಮಾನವೀಯತೆಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಹರೇಕಳ ನಿವಾಸಿ ಸವಾದ್ ಅವರಿಗೆ ಹರೇಕಳ ನಿವಾಸಿಗಳು ಸೇರಿದಂತೆ ಹರೇಕಳ ಗ್ರಾ.ಪಂ ಮಾಜಿ ಅಧ್ಯಕ್ಷ ಬದ್ರುದ್ದೀನ್ ಹರೇಕಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version