Site icon Ullalavani

ಬಸ್‌ನಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನುಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದ ಖಾಸಗಿ ಬಸ್ ಸಿಬ್ಬಂದಿ

ಉಳ್ಳಾಲ: ಬಸ್ಸಿನಲ್ಲಿ ಕುಸಿದುಬಿದ್ದ ಮಹಿಳೆಯನ್ನು ಬಸ್ ಸಿಬ್ಬಂದಿ ನಾಟೆಕಲ್ ಕಣಚೂರು ಆಸ್ಪತ್ರೆಗೆ ಬಸ್ಸಿನಲ್ಲಿಯೇ ಕರೆತಂದು ಮಗದೊಮ್ಮೆ ಮಾನವೀಯತೆ ಮರೆದಿರುವ ಘಟನೆ ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ಸೆ.೨ ರಂದು ನಡೆದಿದೆ.
ವಿಟ್ಲ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಮರ್ಸಿ ಟ್ರಾವೆಲ್ಸ್ ಬಸ್ಸಿನಲ್ಲಿ ಮುಡಿಪು ಟಿಕೆಟ್ ಪಡೆದುಕೊಂಡಿದ್ದ ಮಹಿಳೆ ಮುಡಿಪು ತಲುಪಿದರೂ ಇಳಿಯುವುದು ಕಾಣಲಿಲ್ಲ. ಇದರಿಂದ ನಿರ್ವಾಹಕ ಯಾಕೂಬ್ ಎಂಬವರು ಮಹಿಳೆ ಸಮೀಪ ತೆರಳಿದಾಗ ಸಹಪ್ರಯಾಣಿಕರೊಬ್ಬರು, ಆಕೆ ಅಸ್ವಸ್ಥಳಾಗಿ ಕುಸಿದುಬಿದ್ದರೆಂದು ತಿಳಿಸಿದ್ದಾರೆ. ತಕ್ಷಣ ಕರ‍್ಯಪ್ರವೃತ್ತರಾದ  ಚಾಲಕ ಸವಾದ್ , ನಿರ್ವಾಹಕ ಯಾಕೂಬ್  ೧೦ ಕಿ.ಮೀ ಉದ್ದಕ್ಕೆ ಬಸ್ಸನ್ನು ತಂದು ನಾಟೆಕಲ್ ಕಣಚೂರು ಆಸ್ಪತ್ರೆಯೊಳಕ್ಕೆ ಕೊಂಡೊಯ್ದು ತುರ್ತು ನಿಗಾ ಘಟಕದಲ್ಲಿ  ದಾಖಲಿಸಿದ್ದಾರೆ. ಘಟನೆ ಕುರಿತ ವೀಡಿಯೋ ಕಣಚೂರು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಸದ್ಯ ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಕಂಡುಬAದಿರುವುದಾಗಿ ಬಸ್ ಸಿಬ್ಬಂದಿ ತಿಳಿಸಿದ್ದಾರೆ.
ಮಂಗಳೂರು ನಗರದಲ್ಲಿ ಇದೇ ಮಾದರಿಯಲ್ಲಿ ಎರಡು ಘಟನೆಗಳು ಮಾನವೀಯತೆಗೆ ಸಾಕ್ಷಿಯಾಗಿದ್ದರೆ, ಉಡುಪಿಯಲ್ಲೂ ವಾರದ ಹಿಂದೆ ಇಂತಹದ್ದೇ ಘಟನೆ ನಡೆದಿದ್ದು, ಇದೀಗ ಮುಡಿಪು ಭಾಗದಲ್ಲಿ ಖಾಸಗಿ ಬಸ್ ಸಿಬ್ಬಂದಿ ನಡೆಸಿದ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

Exit mobile version