Site icon Ullalavani

ಶಿಕ್ಷಣವೇ ಅತೀ ದೊಡ್ಡ ಸಂಪತ್ತು – ಬ್ರೈನ್ ಪಿಂಟೋ

ಮಂಜಿನಾಡಿ: ಎಲ್ಲಾ ಸಂಪತ್ತು ಗಿಂತಲೂ ಶಿಕ್ಷಣವೇ ಅತೀ ದೊಡ್ಡ ಸಂಪತ್ತು, ಶಿಕ್ಷಣವನ್ನು ಪಡೆದಷ್ಟು ನಾವು ಬಲಿಷ್ಠ ರಾಗುತ್ತೇವೆ.ನಾವು ಪಡೆದ ಶಿಕ್ಷಣವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ.ಹಾಗಾಗಿ ವಿದ್ಯಾರ್ಥಿಗಳ ಭಾವೀ ಭವಿಷ್ಯಕ್ಕೆ ಶಿಕ್ಷಣವೇ ಪ್ರಧಾನವಾಗಿರುತ್ತದೆ. ಮಕ್ಕಳು ಕಡ್ಡಾಯವಾಗಿ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ ಉತ್ತಮ ಪ್ರಜೆಯಾಗಿ ಮೂಡಿಬರಬೇಕು ಎಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ಬ್ರೈನ್ ಪಿಂಟೋ ಅಭಿಪ್ರಾಯ ಪಟ್ಟರು.

ಇವರು ಸರಕಾರಿ ಹಿರಿಯ ಪ್ರಾಥಮಿಕ ಊರುಮಣೆ ಮಂಜಿನಾಡಿ ಇಲ್ಲಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್ಸ್ ಪುಸ್ತಕ ವಿತರಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಕಾರ್ಯದರ್ಶಿ ರಾಜೇಶ್ ಸೀತಾರಾಮ್, ಪದಾಧಿಕಾರಿಗಳಾದ ಸಂತೋಷ್ ಶೇಟ್ , ಸಾಯಿ ರಾವ್ , ರಾಜಗೋಪಾಲ್ ರೈ, ರಾಜೇಶ್ ಶೆಟ್ಟಿ, ಡಾ. ದೇವದಾಸ್ ರೈ, ಜಗನ್ನಾಥ ಶೆಟ್ಟಿ ಮತ್ತು ಎಸ್.ಡಿ.ಎ.ಸಿ. ಸದಸ್ಯರು ಮತ್ತು ಶಾಲಾ ಸಹಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ಲೋಕಪ್ಪ ಬಿದರಗಡ್ಡಿ ನಿರೂಪಿಸಿದರು. ವನಜಾಕ್ಷಿ ಸಿ. ಎಸ್ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಗೀತಾ ಪಿ ವಂದಿಸಿದರು.

Exit mobile version