ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿಯ ದಿವ್ಯಾ ಸತೀಶ್ ಶೆಟ್ಟಿ ಆಯ್ಕೆಯಾಗಿದ್ದು ಪ್ರವೀಣ್ ಬಗಂಬಿಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದಿವ್ಯಾ ಸತೀಶ್ ಶೆಟ್ಟಿ ತನ್ನ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಹರೀಶ್ ರಾವ್ ವಿರುದ್ದ 12~ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರವೀಣ್ ಬಗಂಬಿಲ ಅವರು ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಜ್ಜಿನಡ್ಕ ಅವರನ್ನು 12- 6 ಅಂತರದಲ್ಲಿ ಸೋಲಿಸಿ ಜಯಗಳಿಸಿದರು.
17 ಸದಸ್ಯರನ್ನು ಹೊಂದಿರುವ ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ 11 ಸ್ಥಾನವನ್ಬು ಹೊಂದಿದ್ದು ಚುನಾವಣೆಯಲ್ಲಿ ಸಂಸದ ಬ್ರಿಜೇಶ್ ಚೌಟ ಮತದಾನ ಮಾಡಿದ್ದರಿಂದ 12 ಮತಗಳನ್ನು ಪಡೆದರೆ ಕಾಂಗ್ರೆಸ್ ನ 4 ಸದಸ್ಯರು, ಪಕ್ಷೇತರ ಮತ್ತು ಎಸ್ ಡಿಪಿಐ ನ 2 ಸದಸ್ಯರು ಪಕ್ಷೇತರ ಅಧ್ಯಕ್ಷ ಮತ್ತು ಕಾಮನಗ್ರೆಸ್ನ ಉಪಾಧ್ಯಕ್ಷ ಅಭ್ಯರ್ಥಿಗಳಿಗೆ ಮತದಾನ ಮಾಡಿದ್ದರು
ಕಳೆದ ಹಲವು ವರುಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಕೋಟೆಕಾರು ಪಟ್ಟಣ ಪಂಚಾಯತ್ ಆಗಿ ಮೆರಲ್ದರ್ಜೆಗೆ ಏರಿದ ಬಳಿಕ ಎರಡನೇ ಚುನಾವಣೆಯಾಗಿದ್ದು ಬಿಜೆಪಿ ಎರಡೂ ಅವಧಿಯಲ್ಲಿ ಅಧಿಕಾರ ನಡೆಸುವಂತಾಗಿದೆ
ಕೋಟೆಕಾರು ಪ.ಪಂ ಅಧ್ಯಕ್ಷೆಯಾಗಿ ದಿವ್ಯಾ ಸತೀಶ್ ಶೆಟ್ಟಿ ಆಯ್ಕೆ
