Site icon Ullalavani

ಶಾಲೆಯ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯ

ಮಂಗಳೂರು: ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿ ಗಳಿಗೆ ಗಾಯವಾಗಿ 180 ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಂತೂರು ಶಾಲೆಯಲ್ಲಿ ಮಂಗಳವಾರ ಸಂಭವಿಸಿದೆ.‌


ವಿದ್ಯಾರ್ಥಿಗಳು ಊಟ ಮಾಡಿ ಹೊರಗೆ ಆಟ ಆಡುತ್ತಿರುವಾಗ ಏಕಾಏಕಿಯಾಗಿ ಮೇಲ್ಚಾವಣಿ ಕುಸಿದಿದೆ.
ಅದೃಷ್ಟವಶಾತ್ ಎಲ್ಲ ವಿದ್ಯಾರ್ಥಿಗಳು ಶಾಲೆಯ ಹೊರಗೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದ್ದು ಘಟನೆಯಲ್ಲಿ ನಾಲ್ಕು ವಿದ್ಯಾರ್ಥಿ ಗಳಿಗೆ ಗಾಯವಾಗಿದ್ದು 180ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ‌ ಶಾಲಾ ವಿದ್ಯಾರ್ಥಿಗಳ ಪೋಷಕರ ದೌಡಾಯಿಸಿದ್ದಾರೆ

ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಕುಂತೂರು, ಫೀಲ್ಡ್ ಇಂಜಿನಿಯರ್ ಅಮಾನತ್ತು ಮಾಡಲಾಗಿದೆ.
ವಿಪತ್ತು ಪರಿಹಾರ ನಿಧಿಯಲ್ಲಿ ಶಾಲೆ ದುರಸ್ತಿ ಕಾರ್ಯಕ್ಕೆ ಹಣ ನೀಡಿದ್ದರು ಆದರೆ ಶಾಲೆಯಲ್ಲಿ ಮಕ್ಕಳನ್ನಿರಿಸಿಕೊಂಡು ದುರುಸ್ತಿ ಕಾರ್ಯಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ರು ಮುಂದಾಗಿದ್ದರು.
ಕಾಮಗಾರಿ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.

Exit mobile version