Site icon Ullalavani

‘ಮುಂಗಾರುಮಳೆ’ ಖ್ಯಾತಿಯ ಪದ್ಮಜಾ ರಾವ್ ಚೆಕ್ ಬೌನ್ಸ್ ಕೇಸ್ ನಲ್ಲಿ ದೋಷಿ: ಹಣ ಪಾವತಿಸದಿದ್ರೆ ಜೈಲು!

ಮಂಗಳೂರು:  ‘ಮುಂಗಾರುಮಳೆ’ ಸಿನಿಮಾ ಖ್ಯಾತಿಯ ಕನ್ನಡದ ಹಿರಿಯ ನಟಿ ಪದ್ಮಜಾರಾವ್ ಲಕ್ಷ ಲಕ್ಷ ರೂ ವಂಚನೆ ಕೇಸ್ ಸಾಬೀತಾಗಿದ್ದು ವಂಚಿಸಿದ ಹಣ ಇನ್ನು ಮೂರು ತಿಂಗಳಿನ ಒಳಗೆ ಪಾವತಿ ಮಾಡದೇ ಇದ್ದ ಪಕ್ಷದಲ್ಲಿ ಜೈಲು ಶಿಕ್ಷೆ ಗೆ ಮಂಗಳೂರು ಕೋಟ್ ೯ ಆದೇಶ ನೀಡಿದೆ.

ಸದ್ಯ ಹಿರಿಯ ನಟಿ ಪದ್ಮಜಾರಾವ್ ಚೆಕ್  ಬೌನ್ಸ್ ಸಂಕಷ್ಟ ಎದುರಿಸಿದ್ದಾರೆ.ವಂಚಿಸಿದ ಹಣ ಪಾವತಿಸದೇ ಇದ್ರೆ ಮೂರು ತಿಂಗಳು ಜೈಲು ಶಿಕ್ಷೆಗೆ ಮಂಗಳೂರು ಕೋರ್ಟ್ ಆದೇಶ ನೀಡಿದೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕುಸುಮಾ ಪಾತ್ರದಲ್ಲಿ ನಟಿಸುತ್ತಿರುವ ಪದ್ಮಜಾ ರಾವ್ ಗೆ ಭಾರೀ ಸಂಕಷ್ಟ ಎದುರಾಗಿದೆ.
ಪದ್ಮಜಾ ರಾವ್ ಗೆ 40 ಲಕ್ಷ ರೂಪಾಯಿ ಹಣ ನೀಡಬೇಕು ಅಥವಾ 3 ತಿಂಗಳು ಜೈಲು ಶಿಕ್ಷೆ ಅನುಭವಿಸಲು ಎಂದು ಕೋರ್ಟ್ ಅದೇಶ ನೀಡಿದೆ.

ತುಳು, ಕನ್ನಡ ಸಿನಿಮಾ ನಿರ್ದೇಶಕ ಮತ್ತು ನಟ ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್‌ ನಿರ್ಮಾಣ ಸಂಸ್ಥೆಯಿಂದ ಪದ್ಮಜಾ ರಾವ್ ಸಾಲ ಪಡೆದ ಬಗ್ಗೆ ಆರೋಪ ಕೇಳಿಬಂದಿದ್ದು. ಹಂತ ಹಂತವಾಗಿ 40ಲಕ್ಷ ರೂಪಾಯಿಗಳನ್ನು ಸಾಲವಾಗಿ ಪದ್ಮಜಾ ರಾವ್ ಪಡೆದಿದ್ದರು.ಹಣ ವಾಪಾಸ್ ನೀಡದೇ ವಂಚಿಸಿ ಕೊನೆಗೆ ಒತ್ತಡಕ್ಕೆ ಮಣಿದು ಚೆಕ್‌ ನೀಡಿದ್ದರು. ಆದರೆ ಖಾತೆಯಲ್ಲಿ ಹಣವಿಲ್ಲದೆ ಆ ಚೆಕ್ ಬೌನ್ಸ್ ಆಗಿತ್ತು.ಈ ಬಗ್ಗೆ ವೀರೇಂದ್ರ ಶೆಟ್ಟಿ ಮಂಗಳೂರಿನ JMFC 8ನೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಆದರೆ ನ್ಯಾಯಾಲಯ ಎಷ್ಟು ಸಮನ್ಸ್ ಕಳಿಸಿದರೂ ಪದ್ಮಜಾ ರಾವ್ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಕೊನೆಗೆ ನ್ಯಾಯಾಲಯ ಪದ್ಮಜಾ ರಾವ್‌ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು.
ಆಕೆಯನ್ನು ಬಂಧಿಸಿ ತರುವಂತೆ ಬೆಂಗಳೂರಿನ ತಲಘಟ್ಟಪುರ ಪೊಲೀಸರಿಗೆ ಆದೇಶ ನೀಡಿತ್ತು
ಆದರೆ ಪೊಲೀಸರು ಬಂಧಿಸುವ ಮೊದಲೇ ಪದ್ಮಜಾ ರಾವ್ ಮಂಗಳೂರು ನ್ಯಾಯಾಲದಲ್ಲಿ ಶರಣಾಗಿ ಜಾಮೀನು ಪಡೆದಿದ್ದರು.ಬಳಿಕ ನಾಲ್ಕು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿತ್ತು. ಇದೀಗ ಈ ಪ್ರಕರಣದಲ್ಲಿ ಪದ್ಮಜಾರಾವ್ ಆರೋಪ ಸಾಬೀತಾಗಿದೆ.40,17,000 ಸಾವಿರ ರೂಪಾಯಿಗಳನ್ನು ದೂರುದಾರ ವೀರೇಂದ್ರ ಶೆಟ್ಟಿಯವರಿಗೆ ಪಾವತಿಸಲು ಮಂಗಳೂರಿನ JMFC 8ನೇ ನ್ಯಾಯಾಲಯ ಆದೇಶಿಸಿದ್ದು ಜೊತೆಗೆ ಜುಲ್ಮಾನೆಯಾಗಿ ಸರಕಾರಕ್ಕೆ 3000 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸಿದ್ದು ಇಲ್ಲವಾದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶ‌ ನೀಡಿದೆ.

Exit mobile version