
ಮುಡಿಪು: ಇಲ್ಲಿನ ಜನ ಶಿಕ್ಷಣ ಟ್ರಸ್ಟ್ ನಲ್ಲಿ ನಡೆದ ಮಳೆ ನೀರು ಕೊಯ್ಲು ಕೊಳವೆಬಾವಿ ಜಲ ಮರು ಪೂರಣ ಕಾರ್ಯ ಗಾರಕ್ಕೆ ನೆರೆಯ ಉದ್ಯಮಿಗಳಿಬ್ಬರು ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸುವ ಮೂಲಕ ಗ್ರಾಮದ ಜಲಸಂರಕ್ಷಣೆಗೆ ಮುನ್ನುಡಿ ಹಾಡಿದ್ದಾರೆ.
ಜನ ಶಿಕ್ಷಣ ಟ್ರಸ್ಟ್, ನಿರ್ಮಿತಿ ಕೇಂದ್ರ, ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್, ಚಿತ್ತಾರ ಬಳಗ ಮತ್ತು ಜನ ಜೀವನ ಬಾಳೆಪುಣಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಳೆ ನೀರು ಕೊಯ್ಲು ಅಭಿಯಾನಕ್ಕೆ ಸರ್ವ ರೀತಿಯಲ್ಲೂ ಸಹಕರಿಸುವುದಾಗಿ ಜನ ಜೀವನ ಬಾಳೆಪುಣಿ ಅಧ್ಯಕ್ಷ ರಮೇಶ ಶೇಣವ, ಉದ್ಯಮಿ ರಾಧಕೃಷ್ಣ ರೈ ಉಮಿಯ ತಿಳಿಸಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಾತನಾಡಿ ಪ್ರತಿಯೊಬ್ಬರು ಜಲ ಸಾಕ್ಷರರಾಗಿ ಜಲ ಸಂರಕ್ಷಣೆಯೊAದಿಗೆ ಜಲ ಮರುಪೂರಣ, ನೀರಿಂಗಿಸಲು ಆರಂಭಿಸಿದರೆ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸ ಬಹುದೆಂದು ತಿಳಿಸಿದ್ದಾರೆ.
ಪಿ.ಎ. ಕಾಲೇಜ್ ನ ಫ್ರೊಫೆಸರ್ ಸಿ.ವಿ ಪೂಜಾರ್, ಇರಾ ಪಂ.ಅಧ್ಯಕ್ಷ ಉಮರ್, ಲಯನ್ಸ್ ಅಧ್ಯಕ್ಷ ಮಂಜುನಾಥ ಆಳ್ವ, ಮುಡಿಪು ಪ್ರೌಢ ಶಾಲಾ ಸಮಿತಿ ಅಧ್ಯಕ್ಷ ಇಬ್ರಾಹಿಂ ತಪ್ಸಿಯ, ಕುರ್ನಾಡು ಪಂ. ಪಿಡಿಒ ಕೇಶವ, ಪಂ.ಸದಸ್ಯರಾದ ಶಮೀಮ, ಅಬ್ದುಲ್ ರಹಿಮಾನ್, ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರನಾಥ ರೈ ಕಲ್ಲಿಮಾರ್, ಮುಖ್ಯ ಶಿಕ್ಷಕಿ ವಿಜಯಲಕ್ಷಿö್ಮÃ ರಾಜ್ಯ ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಅರುಣ, ಆದಿವಾಸಿ ಸಮುದಾಯದ ರಮೇಶ, ರತ್ನ, ಚಿತ್ತಾರ ಬಳಗದ ಚಂದ್ರ ಶೇಖರ ಪಾತೂರು, ಪತ್ರಕರ್ತರಾದ ಗುರುವಪ್ಪ ಬಾಳೆಪುಣಿ, ಅನ್ಸಾರ್ ಇನೋಳಿ, ಅಬ್ಬೋಕರ್ ಜಲ್ಲಿ , ಸ್ಮೈಲ್ ಸ್ಕಿಲ್ ಸ್ಕೂಲ್ ನ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಟ್ರಸ್ಟ್ ನಿರ್ದೇಶಕರು ಪ್ರಾಸವಿಸಿ ಸ್ವಾಗತಿಸಿದರು.ಸಂವಾದ ನಿರ್ವಹಿಸಿದ ನರೇಗ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಜಲ ಸಾಕ್ಷರತಾ ಅಭಿಯಾನದಡಿ ಮನೆಗೊಂದು ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದರ ಮೂಲಕ ಕುಡಿಯುವ ನೀರು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ ಕೊಳ್ಳಬಹುದೆಂದರು.