
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ನಡೆಯಿತು.
ಉಳ್ಳಾಲ : ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭತ್ತ ಕೃಷಿ ಕ್ಷೀಣಿಸುತ್ತಿರುವ ಸಂದರ್ಭ ಕೋಟೆಕಾರು ಬ್ಯಾಂಕ್ ರೈತರನ್ನು ಪ್ರೋತ್ಸಾಹಿಸುವ ಕಾರ್ಯದೊಂದಿಗೆ, ಶೈಕ್ಷಣಿಕ ಸಾಧನೆಗೆ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ದ ಮೂಲಕ ಹುರಿದುಂಬಿಸುವ ಕಾರ್ಯ ಶ್ಲಾಘನೀಯ ಎಂದು ದೇಯಿ ಬೈದದಿ ಕೋಟಿ ಚೆನ್ನಯ್ಯರ ಮೂಲಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ಮೊಕ್ತೇಸರರಾದ ಚಂದ್ರಶೇಖರ್ ಉಚ್ಚಿಲ್ ಹೇಳಿದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ಕೋಟೆಕಾರು ಬೀರಿ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜರಗಿದ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ರಾಷ್ತ್ರೀಕೃತ ಬ್ಯಾಂಕುಗಳ ಉದಯಿಸುವ ಮೊದಲು ಕೃಷಿ ಮತ್ತು ವ್ಯವಹಾರಗಳಿಗೆ ನೆರವಾಗುವ ಉದ್ದೇಶದಿಂದ ಸಹಕಾರಿ ಸಂಘಗಳ ಸ್ಥಾಪನೆಯಾಗಿದೆ. ಸುಬ್ಬಣ್ಣಾಯ ಅವರು ಧರ್ಮಾರ್ಥವಾಗಿ ಸ್ಥಳದಾನಗೈದು ಕೋಟೆಕಾರು ಬ್ಯಾಂಕ್ ಸ್ಥಾಪಿಸಿದ ಫಲವಾಗಿ ಇಂದು ಸಾಮಾಜಿಕವಾಗಿ ಸಹಕರಿಸುತ್ತಾ ಬ್ಯಾಂಕ್ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಅವರ ತ್ಯಾಗವನ್ನು ಸ್ಮರಿಸಿ ಬ್ಯಾಂಕ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿವುದು ಉತ್ತಮವಾದ ಕಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೋಟೆಕಾರು ವ್ಯ.ಸೇ.ಸ. ಬ್ಯಾಂಕ್ ನ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಸ್ವಾಗತಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ಮಾಜಿ ನಿರ್ದೇಶಕ ರಮೇಶ್ ಶೆಟ್ಟಿ ಬೋಳಿಯಾರು, ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎ.ಮಹಮ್ಮದ್ ಬಶೀರ್, ಜಿ.ಪಂ ಮಾಜಿ ಸದಸ್ಯ ವಿನಯ ಕುಮಾರ್ ನಾಯ್ಕ್, ಮಾಜಿ ಅಧ್ಯಕ್ಷ ಹರ್ಷರಾಜ್ ಮುದ್ಯ, ಸೋಮೇಶ್ವರ ಪುರಸಭೆ ಸದಸ್ಯೆ ಲತಾ, ಬ್ಯಾಂಕ್ ಉಪಾಧ್ಯಕ್ಷ ಕೆ.ಬಿ.ಅಬುಸಾಲಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹರ್ಷವರ್ಧನ್ ಉಳ್ಳಾಲ್, ನಿರ್ದೇಶಕರುಗಳಾದ ಗಂಗಾಧರ್ ಯು., ಕೃಷ್ಣಪ್ಪ ಸಾಲ್ಯಾನ್, ಉದಯಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು., ರಾಘವ ಆರ್. ಉಚ್ಚಿಲ್, ರಾಘವ ಸಿ. ಉಚ್ಚಿಲ್, ಪದ್ಮಾವತಿ ಎಸ್. ಶೆಟ್ಟಿ, ಸುರೇಖ ಚಂದ್ರಹಾಸ್, ಬಾಬು ನಾಯ್ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಂತೋಷ್ ಕುಮಾರ್ ಶೆಟ್ಟಿ ನಿರೂಪಿಸಿದರು. ರೈತರ ವಿವರ ಲೋಕಯ್ಯ ಪನೀರ್ ಹಾಗೂ ವಿದ್ಯಾರ್ಥಿಗಳ ವಿವರ ಸುರೇಖಾ ಚಂದ್ರಹಾಸ್ ಓದಿದರು. ಅರುಣ್ ತೊಕ್ಕೊಟ್ಟು ವಂದಿಸಿದರು.
ರೈತರಿಗೆ ಪ್ರೋತ್ಸಾಹ ಧನ, ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನು ಚಂದ್ರಶೇಖರ್ ಉಚ್ಚಿಲ್ ಉದ್ಘಾಟಿಸಿದರು.
ಸೆ.೧೫ ಕ್ಕೆ ಕೆ.ಸುಬ್ಬಣ್ಣಯ್ಯ ಸ್ಮಾರಕ
ಕೋಟೆಕಾರು ಸಹಕಾರ ಸೌಧ ಉದ್ಘಾಟನೆ : ಅಧ್ಯಕ್ಷರು ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು.
ಅಧ್ಯಕ್ಷರು ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು. ಮಾತನಾಡಿ ೧೯೫೪ ರಲ್ಲಿ ಸುಬ್ಬಣ್ಣಯ್ಯ ನಾಯಕ್ ಅವರು ಸ್ಥಾಪಿಸಿದ ಬ್ಯಾಂಕ್ ಸಾಮಾಜಿಕ ಕಳಕಳಿಯ ಕಾರ್ಯವನ್ನು ಅಂದಿನಿAದ ಇಂದಿನವರೆಗೂ ನಡೆಸುತ್ತಾ ಬಂದಿದೆ. ಶೇ.೦% ಮತ್ತು ಶೇ.೩% ನಡಿ ರೈತರಿಗೆ ಸಹಕಾರ ನೀಡುತ್ತಾ ಬಂದಿದೆ. ರಾಜ್ಯದ ಎಲ್ಲಿಯೂ ಇಲ್ಲದ ಯೋಜನೆಯಾದ ಭತ್ತ ಕೃಷಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಎಕರೆಗೆ ರು.೫೦೦೦ ಸಹಾಯಧನ ವಿತರಿಸುತ್ತಿದ್ದು, ಮೈಲ್ ಸುತ್ತನ್ನು ಕಡಿಮೆ ದರದಲ್ಲಿ ವಿತರಿಸುತ್ತಾ ಬಂದಿರುವ ಬ್ಯಾಂಕ್ ಅಡಿಕೆ ಬೆಳೆಯುವ ರೈತರಿಗೆ ಉಚಿತ ಸುಣ್ಣ ನೀಡುವ ಯೋಜನೆಗೆ ಚಾಲನೆ ನೀಡಿದೆ. ಇದೀಗ ಹೊಸಮೈಲಿಗಲ್ಲನ್ನು ಸ್ಥಾಪಿಸಿ ಕೋಟೆಕಾರು ಬೀರಿಯಲ್ಲಿ ಐದು ಮಹಡಿಯ ಕೆ.ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧ ಸ್ಥಾಪಿಸಿ ಸೆ.೧೫ ರಂದು ಉದ್ಘಾಟನಾ ಸಮಾರಂಭ ಜರಗಲಿದೆ ಎಂದರು.
ರೈತರಿಗೆ ಪ್ರೋತ್ಸಾಹ ಧನ, ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಸೆ.೧೫ ರಂದು ಉದ್ಘಾಟನೆಗೊಳ್ಳಲಿರುವ ಕೋಟೆಕಾರು ಸಹಕಾರ ಸೌಧದ ಆಮಂತ್ರಣಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.