Site icon Ullalavani

ಆಳಸಮುದ್ರ ಮೀನುಗಾರಿಕಾ ಬೋಟ್‌ ನಲ್ಲಿ ಬೆಂಕಿ ಅವಘಡ, ಹಲವು ಮೀನುಗಾರರು ಸಮುದ್ರ ಮಧ್ಯೆ ಸಿಲುಕಿರುವ ಶಂಕೆ, ಉಳ್ಳಾಲವಾಣಿಯಿಂದ ಜಿಲ್ಲಾಡಳಿತದ ಕಂಟ್ರೋಲ್‌ ರೂಂ ಗೆ ಮಾಹಿತಿ


ಉಳ್ಳಾಲ: ಆಳಸಮುದ್ರ ಮೀನುಗಾರಿಕೆಗೆ ತೆರಳಿರುವ ಮೀನುಗಾರಿಕಾ ಬೋಟ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉಳ್ಳಾಲದ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಸಮುದ್ರ ಮಧ್ಯಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ದೋಣಿಯೊಳಗೆ ಹಲವು ಮೀನುಗಾರರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕೇರಳ ಭಾಗದಿಂದ ಮೀನುಗಾರಿಕೆಗೆ ತೆರಳಿರುವ ಬೋಟ್‌ ನಲ್ಲಿ ಅವಘಢ ಸಂಭವಿಸಿರುವುದಾಗಿ ತಿಳಿದುಬವಂದಿದ್ದು, ಜೀವರಕ್ಷಕ ಸಂಘದ ಸದಸ್ಯರು ಪೊಲೀಸ್‌ ಇಲಾಖೆ, ಜಿಲ್ಲಾಡಳಿತ, ಬಂದರು ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಉಳ್ಳಾಲವಾಣಿಯೂ ಜಿಲ್ಲಾಧಿಕಾರಿಗಳ ಕೇಂದ್ರ ಕಚೇರಿ ಕಂಟ್ರೋಲ್‌ ರೂಮಿಗೆ ಮಾಹಿತಿಯನ್ನು ನೀಡಿದ್ದು, ರಕ್ಷಣಾ ಕಾರ್ಯ ಶೀಘ್ರವೇ ಕೈಗೊಳ್ಳುವ ಮಾಹಿತಿಯನ್ನು ಪತ್ರಿಕಾ ಕಚೇರಿಗೆ ನೀಡಿದೆ.

Exit mobile version