Site icon Ullalavani

ಬುಧವಾರದಂದು ದ‌.ಕ ಜಿಲ್ಲೆ ಯಾದ್ಯಂತ ಬೃಹತ್ ರಸ್ತೆ ತಡೆ ಪ್ರತಿಭಟನೆ!

ಮಂಗಳೂರು: ದೇಶದ್ರೋಹಿ ಹೇಳಿಕೆ ನೀಡಿರುವ ಐವನ್ ಡಿಸೋಜ ಮೇಲೆ ಯಾವುದೇ ರೀತಿಯಾದ ಕಾನೂನು ಕ್ರಮ ಕೈಗೊಂಡಿಲ್ಲ. ರಾಜ್ಯಪಾಲರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿ ಇಷ್ಟು ದಿನವಾದರೂ ಐವನ್ ವಿರುದ್ದ ಎಫ್ಐಆರ್‌ ಆಗಿಲ್ಲ.  ಈ ಹಿನ್ನಲೆಯಲ್ಲಿ ಬಿಜೆಪಿ ಯುವಮೋರ್ಛಾ ಆಕ್ರೋಶಗೊಂಡಿದ್ದು  ಬುಧವಾರದಂದು ಬೃಹತ್ ರಸ್ತೆ ತಡೆಗೆ ಮುಂದಾಗಿದೆ. ಈ ಬಗ್ಗೆ ಮಂಗಳೂರಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ  ಯುವಮೋರ್ಛಾ ದ.ಕ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಹೇಳಿಕೆ ನೀಡಿದ್ದಾರೆ.

ಎಂಎಲ್ ಸಿ ಐವನ್ ಡಿಸೋಜಾ ವಿರುದ್ಧ ಬುಧವಾರ ದ‌.ಕ ಜಿಲ್ಲೆಯಾದ್ಯಂತ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುತ್ತದೆ. ಬರ್ಕೆ ಠಾಣೆ ಇನ್ಸ್ಪೆಕ್ಟರ್ ದೂರು ಪಡೆದು ಹಿಂಬರಹ ಕೊಟ್ಟಿದ್ದರು.ಕಾನೂನು ಸಲಹೆ ಪಡೆದು ಎಫ್ಐಆರ್‌ ದಾಖಲಿಸೋ ಭರವಸೆ ನೀಡಿದ್ದರು. ಆದರೆ 48 ಗಂಟೆ ಕಳೆದರೂ ಎಫ್ಐಆರ್‌ ದಾಖಲಿಸದೇ ಇದ್ದಾಗ ಮುತ್ತಿಗೆ ನಿರ್ಧಾರ ಮಾಡಿದೆವು. ಆಗಲೂ ಮತ್ತೆ ಭರವಸೆ ಕೊಟ್ಟ ಕಾರಣ ನಾವು ಸುಮ್ಮನಾದೆವು. ಐವನ್ ಡಿಸೋಜಾ ಕ್ಷಮೆ ಕೇಳುವ ಬದಲು ಹೇಳಿಕೆ ಸಮರ್ಥನೆ ಮಾಡುತ್ತಾ ಇದ್ದಾರೆ. ಹೀಗಾಗಿ ನಮಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಹೊರಟು ಹೋಗಿದೆ. ಹಾಗಾಗಿ ಬುಧವಾರದಿಂದ ನಮ್ಮ ಸರಣಿ ಹೋರಾಟಗಳು ಆರಂಭವಾಗಲಿದೆ. ದ.ಕ ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಬುಧವಾರ ರಸ್ತೆ ತಡೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಐವನ್ ವಿರುದ್ದ ಎಫ್ಐಆರ್‌ ದಾಖಲಾಗುವವರೆಗೆ ನಿರಂತರ ಹೋರಾಟ.ಕಲ್ಲು ಎಸೆಯುವ ಯಾವುದೇ ಕೃತ್ಯಕ್ಕೆ ಬಿಜೆಪಿ ಕಾರ್ಯಕರ್ತರು ಕೈ ಹಾಕಲ್ಲ‌‌.ನಾವು ರಸ್ತೆ ತಡೆ ವಿಚಾರದಲ್ಲಿ ಜನರ ಕ್ಷಮೆ ಕೇಳುತ್ತೇವೆ. ಆದರೆ ಕಾನೂನು ರಕ್ಷಕರು ರಾಷ್ಟ್ರವಿರೋಧಿಗಳಿಗೆ ಬೆಂಬಲ ಕೊಡುತ್ತಾ ಇದ್ದಾರೆ. ಹಾಗಾಗಿ ರಸ್ತೆ‌ ತಡೆ ಪ್ರತಿಭಟನೆ ನಮಗೆ ಅನಿವಾರ್ಯವಾಗಿದೆ ಎಂದಿದ್ದಾರೆ.

Exit mobile version