Site icon Ullalavani

ಮನೆಯಲ್ಲಿ ಕೂಡಿ ಹಾಕಿ ಯುವಕನಿಗೆ ಮಾರಾಣಾಂತಿಕ‌ ಹಲ್ಲೆ!

ಪೂತ್ತೂರು: ಮನೆಯಲ್ಲಿ ಕೂಡಿ ಹಾಕಿ ಯುವಕನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ವಿಡಿಯೋದ ತುಣುಕ್ಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಘಟನೆ  ದ.ಕ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ ಎನ್ನಲಾಗಿದೆ.


ಬೊಳಂತರು ನಿವಾಸಿ ರಹೀಮ್ ಎಂಬಾತನ ಮೇಲೆ ಯುವಕರ ಗುಂಪು ತದ್ವಾತದ್ವ ಹಲ್ಲೆ ನಡೆಸಿದ್ದು  ಥಳಿಸುವ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.
ಎಲ್ಲಿ ಈತನಿಗೆ ಹೊಡೆದಿದ್ದಾರೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಪೋಲೀಸ್ ಮೂಲದ ಮಾಹಿತಿ ಪ್ರಕಾರ ಪುತ್ತೂರು ಯುವಕರ ತಂಡ ಹುಡುಗಿ ವಿಚಾರದಲ್ಲಿ ಕೂಡಿ ಹಾಕಿ ಥಳಿಸಲಾಗಿರುವ ಮಾಹಿತಿ ಸಿಕ್ಕಿದೆ.‌ಈ  ಬಗ್ಗೆ ಜಿಲ್ಲೆಯ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ‌.ಪ್ರಕರಣವನ್ನು ರಾಜಿಯಲ್ಲಿ ಮುಗಿಸಿರೋ ಮಾಹಿತಿ ಲಭ್ಯವಾಗಿದೆ.

Exit mobile version