ಉಳ್ಳಾಲ: ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಳ್ಳಾಲ ವಲಯ ವಲಯದ ಹಿರಿಯ ಛಾಯಾಗ್ರಾಹಕ
ಅಬ್ದುಲ್ ಮಜೀದ್ ಅವರನ್ನು ಉಳ್ಳಾಲದ ಸ್ವಗೃಹದಲ್ಲಿ ಸನ್ಮಾನಿಸಿದರು.
ಕಳೆದ 30 ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಅಪಾರವಾದ ಅನುಭವವನ್ನು ಹೊಂದಿದ ಮಜೀದ್ ರವರು, ನಾಟಕ, ಚಲನ ಚಿತ್ರ, ಟೆಲಿ ಫಿಲಂಗಳಲ್ಲಿಯೂ ಅಭಿನಯಿಸಿದ್ದಾರೆ.
ಈ ಸಂದರ್ಭ ಕುಟುಂಬಸ್ಥರು ಹಾಗೂ ವಲಯದ ಅಧ್ಯಕ್ಷ ಪ್ರವೀಣ್ ಬೀರಿ, ಕಾರ್ಯದರ್ಶಿ ನಾಗರಾಜ್, ಕೋಶಾಧಿಕಾರಿ ಸಿದ್ದೀಕ್, ಗೌರವಾಧ್ಯಕ್ಷ ತನುಂಜಯ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ ತೊಕ್ಕೊಟ್ಟು, ಕಟ್ಟಡ ಸಮಿತಿ ಸದಸ್ಯರು ಅರುಣ್ ಉಳ್ಳಾಲ್, ಸಂದೇಶ್, ಸಚಿನ್ ಶೆಟ್ಟಿ, ಸುಶಾನ್ ಶೆಟ್ಟಿ, ಕಿರಣ್ ತಲಪಾಡಿ, ಪದ್ಮನಾಭ ಸುವರ್ಣ, ಸಂತೋಷ್ ಮಾರ್ಲ ಹಾಗೂ ಕಿರಣ್ ಉಳ್ಳಾಲ್ ಉಪಸ್ಥಿತರಿದ್ದರು.
ಎಸ್.ಕೆ.ಪಿ.ಎ ಉಳ್ಳಾಲ ವಲಯದಿಂದಹಿರಿಯ ಛಾಯಗ್ರಾಹಕರಿಗೆ ಸನ್ಮಾನ
