Site icon Ullalavani

ಗ್ರಾಮಚಾವಡಿ: ಬ್ರಹ್ಮಶ್ರೀ ನಾರಾಯಣ ಗುರುವರ್ಯರ170ನೇ ಜನ್ಮದಿನೋತ್ಸವ ಸಮಾರಂಭ

ಗ್ರಾಮಚಾವಡಿ:  ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜನ್ಮದಿನೋತ್ಸವ ಸಮಾರಂಭವು
ಆ.25ರ ಭಾನುವಾರದಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾಕಾರ್ಯಕ್ರಮ ಗಳೊಂದಿಗೆ  ನಡೆಯಲಿದೆ.
ಸಂಜೆ 4.30ಕ್ಕೆ ಕೀರ್ತಿ ಶೇಷ ಶ್ರೀ ಭುಜಂಗ ಕೋಟ್ಯಾನ್ ಪಾವೂರು ವೇದಿಕೆಯಲ್ಲಿ ನಡೆಯಲಿರುವ
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ಇದರ ಬ್ರಹ್ಮಕಲಶೋತ್ಸವ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು ವಹಿಸಲಿದ್ದು ಉದ್ಘಾಟನೆಯನ್ನು   ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿ. ಎಲ್, ಧರ್ಮ ನೆರವೇರಿಸಲಿದ್ದಾರೆ.
ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಪ್ರತಿಭಾ ಪುರಸ್ಕಾರ ವಿತರಣೆಯನ್ನು ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನಡೆಸಲಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಬಹುಮಾನ ವಿತರಿಸಲಿದ್ದಾರೆ.
ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಸುರೇಶ್ ಭಟ್ನಗರ,
ಶ್ರೀ ಗೋಕರ್ಣನಾಥ ಕೊ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರು ಎಂ. ರಾಮಚಂದ್ರ ಮಂಗಳೂರು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪ್ರಯುಕ್ತ ಭಜನಾ ಸಂಕೀರ್ತನೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಯಕ್ಷಗಾನ ಅಧ್ಯಯನ ಕೇಂದ್ರ ಗ್ರಾಮಚಾವಡಿ ಇದರ ವತಿಯಿಂದ ಶ್ರೀ ರಾಮ ಶರಣ ಕನ್ನಡ ಯಕ್ಷಗಾನ ನಡೆಯಿಲಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.‌

Exit mobile version